ಪಾವಗಡ: ತಾಲೂಕು ಕ್ಷೇಮಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಪ್ರತಿಭಾ ಪುರಸ್ಕಾರ, ಶಿಕ್ಷಕರಿಗೆ ಸನ್ಮಾನ ಮತ್ತು ವಿದ್ಯಾರ್ಥಿ ವೇತನ ಕಾರ್ಯಕ್ರಮವನ್ನು ಎಸ್.ಕೆ.ವೆಂಕಟ ರೆಡ್ಡಿ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಈರಪ್ಪ ರೆಡ್ಡಿ ವಹಿಸಿದ್ದರು. ಒಟ್ಟು 19 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ 1.40 ಲಕ್ಷ, 13 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ 34 ಸಾವಿರ ಹಾಗೂ 10 ಜನ ಉತ್ತಮ ಶಿಕ್ಷಕರಿಗೆ ಸನ್ಮಾನ ಮಾಡಲಾಯಿತು.
ಕಾರ್ಯದರ್ಶಿ ಡಾ.ಡಿ.ಪರಮೇಶ ನಾಯ್ಕ್ ಮಾತನಾಡಿ, ಕಳೆದ 23 ವರ್ಷ ಗಳಿಂದ ಸುಮಾರು 700 ವಿದ್ಯಾರ್ಥಿಗಳಿಗೆ 50 ಲಕ್ಷ ರೂ. ಗಳನ್ನು ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ನೀಡಲಾಗಿದೆ ಹಾಗೂ ಸುಮಾರು 200 ಶಿಕ್ಷಕರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಗಿದೆ ಎಂದರು.
ಡಾ.ಗೋವಿಂದಪ್ಪ, ಸಾಂಬಾಸದ ಶಿವ ರೆಡ್ಡಿ, ಕೆಬಿವಿ ಪತಿ, ಎಂ.ಜೆ.ಚಿತ್ತಯ್ಯ, ಚನ್ನಕೇಶವ ರೆಡ್ಡಿ, ಡಾ.ಲಕ್ಷ್ಮೀ ಪತಿ, ಡಾ. ವೆಂಕಟೇಶಲು, ಎಲ್ಲಾದ್ರಿ, ಉಮಾಕಾಂತ್, ಮುಕ್ತ ಪ್ರಸಾದ್, ನಾಗರಾಜ್, ವಿದ್ಯಾಸಾಗರ ಭಾಗವಹಿಸಿದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


