ಸರಗೂರು: ಅಖಿಲ ನಾಮಧಾರಿಗೌಡ ಸಂಘದ ನೂತನ ಅಧ್ಯಕ್ಷರಾಗಿ ಎಚ್.ಡಿ.ರತ್ನಯ್ಯ ಹಾಗೂ ಪ್ರಧಾನ ಕಾರ್ಯದರ್ಶಿರಾಗಿ ಪ್ರಕಾಶ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಪಟ್ಟಣದ ಅಖಿಲ ನಾಮಧಾರಿಗೌಡ ಸಮುದಾಯ ಭವನದಲ್ಲಿ ಭಾನುವಾರ ಅಖಿಲ ನಾಮಧಾರಿಗೌಡ ಸಂಘ ಸರಗೂರು ಶಾಖೆಯಿಂದ ನಡೆದ ಡಿ.ಸುಂದರ್ ದಾಸ್ ಸಂಘದ ಸರ್ವ ಸದಸ್ಯರ ಮಹಾಸಭೆಯಲ್ಲಿ ಉಪಾಧ್ಯಕ್ಷರಾಗಿ ಕೆ.ಬೆಳ್ತೂರು ಪ್ರಕಾಶ್, ಕಾರ್ಯದರ್ಶಿಯಾಗಿ ಮಟಕೆರೆ ನಾಗೇಶ್ ಅವರನ್ನು 3 ವರ್ಷದ ಅವಧಿಗೆ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾದರು.
ನಂತರ ಮಾತನಾಡಿದ ನೂತನ ಅಧ್ಯಕ್ಷ ಎಚ್.ಡಿ.ರತ್ನಯ್ಯ, ನಾಮಧಾರಿಗೌಡ ಸಮಾಜ ಸರ್ವಾನುಮತದಿಂದ ನೀಡಲಾದ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳದೇ ಪ್ರಾಮಾಣಿಕತೆಯಿಂದ ಸಮಾಜದ ಏಳಿಗೆಗಾಗಿ ಶಕ್ತಿಮಿರಿ ಶ್ರಮಿಸುತ್ತೇನೆ. ಸಮುದಾಯಭವನ ನೂತನ ರೂಪ ಪಡೆಯಲು ಕೆಲಸ ಮಾಡುತ್ತೇನೆ. ಹೀಗಾಗಿ ಇದಕ್ಕೆ ಸಮಾಜದ ಬಂಧುಗಳ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.
ಮಹಾಸಭೆ: ಇದೇ ಸಂದರ್ಭದಲ್ಲಿ ಸಂಘದ ಪ್ರಭಾರ ಅಧ್ಯಕ್ಷ ವಿನೋದ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಸರ್ವಸದಸ್ಯರ ಮಹಾಸಭೆಯನ್ನು ಅಖಿಲ ನಾಮಧಾರಿಗೌಡ ಸಂಘದ ಕೇಂದ್ರ ಸಮಿತಿ ಅಧ್ಯಕ್ಷ ಕೆ.ಟಿ.ಗೋವಿಂದರಾಜು ಉದ್ಘಾಟಿಸಿದರು. ಬೀಜ ನಿಗಮದ ಮಾಜಿ ಅಧ್ಯಕ್ಷ ಡಿ.ಸುಂದರ್ ದಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಕಳೆದ 3 ವರ್ಷದ ಆಡಿಟ್ ವರದಿ, 26–27ನೇ ಸಾಲಿನ ಅಯವ್ಯಯ ವರದಿಯನ್ನು ಕಾರ್ಯದರ್ಶಿ ಎ.ಅಕಪ್ಪ ಓದಿದರು.
ಈ ಸಂದರ್ಭದಲ್ಲಿ ಶ್ಯಾಮ್ ಸುಂದರ್, ಜಿಪಂ ಮಾಜಿ ಸದಸ್ಯರಾದ ಎಂ.ಎನ್.ಜಗದೀಶ್, ಪಿ.ರವಿ, ಸಂಘದ ಮಾಜಿ ಅಧ್ಯಕ್ಷರಾದ ಬಿ.ಸಿ.ಬಸಪ್ಪ, ಎಚ್.ದೇವದಾಸ್, ಕೇಂದ್ರ ಸಮಿತಿ ಉಪಾಧ್ಯಕ್ಷ ಮಲ್ಲಿಕಾರ್ಜುನ, ಸಣ್ಣಸ್ವಾಮಿಗೌಡ, ಬಿ.ಎಂ.ಚಿನ್ನಪ್ಪ, ಎಂ.ರಾಜಶೇಖರ್, ಪ್ರೊ.ಎ.ಎಸ್.ಬಾಲಸುಬ್ರಹ್ಮಣ್ಯ, ಎಂ.ಎನ್.ನಟರಾಜು, ರವಿಶಂಕರ್, ಕಾರ್ಯಾಧ್ಯಕ್ಷ ಸಿ.ಪಿ.ಬಸವರಾಜು, ಖಜಾಂಚಿ ಎ.ಎಸ್.ಪದ್ಮರಾಜು, ಉಸ್ತುವಾರಿ ಸದಸ್ಯರಾದ ವೈ.ಪಿ.ನಾಗರಾಜು, ಕೆ.ಮಹೇಶ್, ಪಿ.ಮಹದೇವು, ಮಹದೇವು, ಮೇಲ್ವಿಚಾರಕ ನಾಗೇಂದ್ರಪ್ಪ, ಅಡ್ಡಹಳ್ಳಿ ನಂದಕುಮಾರ್, ಉದಯಕುಮಾರ್ ,ಸೇರಿದಂತೆ ಇನ್ನಿತರರು ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


