ಬೀದರ್: ತಾಯಿ ತನ್ನ ಮಗುವಿನೊಂದಿಗೆ ನಾಪತ್ತೆಯಾಗಿರುವ ಘಟನೆ ಗಾಂಧಿ ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ತಿಳಿಸಬೇಕು ಎಂದು ಗಾಂಧಿ ಗಂಜ್ ಪೊಲೀಸ್ ಠಾಣೆ ಎಎಸ್ ಐ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ನಗರದ ಸಿ ಎಮ್ ಸಿ ಕಾಲೋನಿಯ ನಿವಾಸಿಯಾದ ಜೀನತ್ (ಪಲ್ಲವಿ) ಮತ್ತು ಮಗ ಹರ್ಪಿತ್ ಪಾಂಚಾಳ್ (3 ವರ್ಷ) ನಾಪತ್ತೆಯಾದ ತಾಯಿ ಮಗು ಆಗಿದ್ದಾರೆ. ಅವರು ಡಿ.15 ರಂದು ಮನೆಯಿಂದ ಹೊರಗಡೆ ಹೋದವರು ಮರಳಿ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.
ಜೀನತ್ 5.3 ಅಡಿ ಎತ್ತರ ಇದ್ದು, ಕೆಂಚನೆ ಬಣ್ಣ, ತೆಳುವಾದ ಶರೀರ ಹೊಂದಿದ್ದಾರೆ. ಮನೆಯಿಂದ ಹೊರಡುವಾಗ ಮೈಮೇಲೆ ಹಳದಿ ಬಣ್ಣದ ಚೂಡಿದಾರ, ಹಳದಿ ಬಣ್ಣದ ಪೈಜಾಮ ಧರಿಸಿದ್ದರು. ಇವರು ಕನ್ನಡ, ಹಿಂದಿ ಭಾಷೆ ಮಾತನಾಡ ಬಲ್ಲವರಾಗಿದ್ದಾರೆ.
ನಾಪತ್ತೆಯಾದ ಮಹಿಳೆ ಹಾಗೂ ಮಗುವಿನ ಕುರಿತು ಯಾರಿಗಾದರೂ ಮಾಹಿತಿ ಇದ್ದಲ್ಲಿ ಸಂಪರ್ಕಿಸುವಂತೆ ಬೀದರ್ ನ ಗಾಂಧಿ ಗಂಜ್ ಠಾಣೆ ಪೊಲೀಸರು ಮನವಿ ಮಾಡಿದ್ದಾರೆ.
ವರದಿ: ಅರವಿಂದ ಮಲ್ಲೀಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


