ಸರಗೂರು: ತಾಲೂಕಿನಾದ್ಯಂತ ಡಿ. 21ರಿಂದ 24 ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯುತ್ತದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ತಿಳಿಸಿದರು.
ನಮ್ಮ ತಾಲ್ಲೂಕಿನಲ್ಲಿ ಪಟ್ಟಣದ ಒಟ್ಟು ಜಸಂಖ್ಯೆ: 8,313
ಗ್ರಾಮೀಣ ಒಟ್ಟು ಜನ ಸಂಖ್ಯೆ: 81,820
ಒಟ್ಟು ಜನಸಂಖ್ಯೆ: 90,133
0-5 ವರ್ಷದೊಳಗಿನ ಒಟ್ಟು ಮಕ್ಕಳ ಸಂಖ್ಯೆ: 5,804
ಒಟ್ಟು ಪಲ್ಸ್ ಪೋಲಿಯೋ ಬೂತ್ ಗಳ ಸಂಖ್ಯೆ– 66
ಟ್ರಾನ್ಸ್ಲೇಷನ್ ಬೂತ್ ಗಳ ಸಂಖ್ಯೆ- -01
ಮೊಬೈಲ್ ಟೀಮ್–01
ನಿಯೋಜನೆ ಮಾಡುವ ಒಟ್ಟು ಸಿಬ್ಬಂದಿಗಳ ಸಂಖ್ಯೆ 272
ಮೇಲ್ವಿಚಾರಕರು 14
ಈ ಕಾರ್ಯಕ್ರಮವು ನಾಲ್ಕು ದಿನ ನಡೆಯುತ್ತದೆ ಆದುದರಿಂದ ಇತರೆ ಇಲಾಖೆ ಅಧಿಕಾರಿಗಳು, ಎಲ್ಲ ಸಂಘ-ಸಂಸ್ಥೆಯವರು, ಎನ್ ಜಿ ಓ ಸಂಸ್ಥೆ ರವರು ಸಹಕಾರ ನೀಡಬೇಕು ಎಂದು ತಿಳಿಸಿದರು. ಮತ್ತು ಸಾರ್ವಜನಿಕರು ದಿನಾಂಕ: 21–12–2025 ರಂದು ನಿಮ್ಮ 0–5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಈ ಹಿಂದೆ ಎಷ್ಟು ಬಾರಿ ಪೋಲಿಯೋ ಹಾಕಿಸಿದರೂ ಸಹ ಕಡ್ಡಾಯವಾಗಿ ಪಲ್ಸ್ ಪೋಲಿಯೋ ಲಸಿಕೆಯನ್ನು ಹಾಕಿಸಿ ಎಂದು ಕರೆ ನೀಡಿದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


