ಪಾವಗಡ: ತಾಲ್ಲೂಕಿನ ನಾಗಲಮಡಿಕೆ ಹೋಬಳಿಯ ತಿಮ್ಮಮ್ಮನಹಳ್ಳಿಯಲ್ಲಿ ರೈತರು ತಮ್ಮ ಜಮೀನುಗಳಿಗೆ ಹೋಗಲು ರಸ್ತೆಯ ಸಮಸ್ಯೆಯಿದ್ದು ಅಧಿಕಾರಿಗಳು ಶೀಘ್ರವೇ ಬಗೆಹರಿಸಬೇಕೆಂದು ಒತ್ತಾಯಿಸಿದರು.
ಹಸಿರು ಸೇನೆಯ ಜಿಲ್ಲಾಧ್ಯಕ್ಷ ಪೂಜಾರಪ್ಪ ಮಾತನಾಡಿ, ತಿಮ್ಮಮ್ಮನಹಳ್ಳಿಯಲ್ಲಿ ರೈತನೊಬ್ಬ ತನ್ನ ಜಮೀನಿನ ಮೂಲಕ ಹೋಗಲು ಇತರೇ ರೈತರಿಗೆ ರಸ್ತೆ ಬಿಡದೆ ತೊಂದರೆ ನೀಡುತ್ತಿದ್ದು, ರೈತರ ಜಮೀನಿಗೆ ಹೋಗಲು ನಕಾಶೆ ರಸ್ತೆಯನ್ನು ಗುರುತಿಸಿ ರಸ್ತೆಯ ಸಮಸ್ಯೆಯನ್ನು ಅಧಿಕಾರಿಗಳು ಶೀಘ್ರ ಬಗೆಹರಿಸಬೇಕೆಂದು ಒತ್ತಾಯ ಮಾಡಿದರು.
ಈ ಕೂಡಲೇ ಸರ್ವೇ ಅಧಿಕಾರಿಗಳು, ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ, ರೈತರ ರಸ್ತೆ ಸಮಸ್ಯೆ ಯನ್ನು ಬಗೆ ಹರಿಸಿ ಕೊಡಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ರೈತ ಸಂಘದ ಸದಸ್ಯರಾದ ಗೋಪಾಲಪ್ಪ, ಗುಡಿಪಲ್ಲಪ್ಪ, ನಾಗರಾಜು, ರಾಮಣ್ಣ, ಲಕ್ಷ್ಮೀದೇವಿ, ಹನುಮಂತರಾಯ, ನಾಗಪ್ಪ ಮುಂತಾದವರು ಹಾಜರಿದ್ದರು.
ವರದಿ : ನಂದೀಶ್ ನಾಯ್ಕ ಪಿ., ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


