ಕೊರಟಗೆರೆ: ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಕಾಮರಾಜು ಪಶ್ಚಿಮ ವಲಯ ರೈಲ್ವೆ ಅಂದ್ರೆ ಇದು ಹುಬ್ಬಳ್ಳಿ ವಲಯ ಅದಕ್ಕೆ ಸಂಬಂಧ ಪಟ್ಟಂತ ಜಿಲ್ಲೆಗಳ ಒಂದು ನಿರ್ದೇಶಕರನ್ನಾಗಿ ಆಯ್ಕೆ ಮಾಡಿದ್ದಾರೆ, ಅವರಿಗೆ ಶುಭಾಶಯಗಳು ಎಂದು ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಪಿ.ಆರ್.ಸುಧಾಕರ್ ಲಾಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಜೆಡಿಎಸ್ ಪಕ್ಷದ ಅಧ್ಯಕ್ಷರಾದ ಕಾಮರಾಜ್ ನಿರ್ದೇಶಕನಾಗಿ ಆಯ್ಕೆ ಮಾಡಿದ ನಮ್ಮ ತುಮಕೂರು ಸಂಸದ ಕೇಂದ್ರ ಸಚಿವರು ವಿ. ಸೋಮಣ್ಣ ನವರಿಗೆ ಧನ್ಯವಾದಗಳು ಎಂದ ತಿಳಿಸಿದರು.
ನಮ್ಮ ಕೇಂದ್ರ ಸಚಿವರು ತುಮಕೂರಿನ ಲೋಕಸಭಾ ಸದಸ್ಯರು ಕೇಂದ್ರ ಜನಶಕ್ತಿ ಮತ್ತು ರೈಲ್ವೆ ಸಚಿವರಾಗಿರತಕ್ಕಂತಹ ವಿ.ಸೋಮಣ್ಣನವರು ನಮ್ಮ ಪಕ್ಷದ ಜೆಡಿಎಸ್ ಪಕ್ಷದ ಅಧ್ಯಕ್ಷರಾಗಿರ್ತಕ್ಕಂತ ಕಾಮರಾಜುರವರಿಗೆ ಆಯ್ಕೆ ಮಾಡಿರುವುದು ಬಹಳ ಸಂತೋಷದ ವಿಷಯ. ಈ ಒಂದು ಹುದ್ದೆಗೆ ಕಾಮರಾಜ್ ನೇಮಕ ಆಗಿರುವುದು ನಿಜವಾಗ್ಲೂ ಕೂಡ ಎಲ್ಲರಿಗೂ ಕೂಡ ಸಂತೋಷವನ್ನು ಮಾಡಿದೆ ಎಂದರು.
ಜನಗಳ ಸೇವೆ ಮಾಡ್ಲಿಕ್ಕೆ ಹಾಗೂ ಎನ್ ಡಿ ಎ ಪಕ್ಷ ಬಲಗೋಳಿಸುವುದು ಹೆಚ್ಚಿನ ಒಂದು ಅವಕಾಶ ಕೊಟ್ಟಿದಾರೆ ಹಾಗಾಗಿ ಅವರಿಗೆ ನಾನು ಅಭಿನಂದನೆಗಳನ್ನ ಹೇಳ್ತೇನೆ ಎಂದರು.
ಜೆಡಿಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ಕಾಮರಾಜು ಮಾತನಾಡಿ, ಕೇಂದ್ರ ಸಚಿವರು ತುಮಕೂರು ಲೋಕಸಭಾ ಸದಸ್ಯರು ಸೋಮಣ್ಣನವರು ಹಾಗೂ ನಮ್ಮ ದೇಶದ ಮಾಜಿ ಪ್ರಧಾನಮಂತ್ರಿ ದೇವೆಗೌಡರವರಿಗೂ ನಮ್ಮನ್ನು ಗುರುತಿಸಿ ಈ ಪಚ್ಛಿಮ ಭಾಗದ ರೈಲ್ವೆ ಬೋರ್ಡ್ ನಿರ್ದೇಶಕರನ್ನಾಗಿ ಆಯ್ಕೆ ಮಾಡಿದ್ದಾರೆ ಅವರಿಗೆ ಹಾಗೂ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರು ಎಚ್ ಡಿ ಕುಮಾರಸ್ವಾಮಿರವರಿಗೂ ನನ್ನ ಕಡೆಯಿಂದ ಧನ್ಯವಾದಗಳು ತಿಳಿಸುತ್ತೇನೆ ಎಂದು ಕಾಮರಾಜು ತಿಳಿಸಿದರು..
ಇದೇ ಸಂದರ್ಭದಲ್ಲಿ ತುಮುಲ್ ಸಿದ್ದಗಂಗಯ್ಯ ,ಲಕ್ಷ್ಮೀಶ್, ಲಕ್ಷ್ಮಣ್,ರಂಗಣ್ಣ ದೊಡ್ಡಯ್ಯ , ರಮೇಶ್,ಅಶ್ವಥ್ ನಾರಾಯಣರಾಜು, ಕೊಡ್ಲಹಳ್ಳಿ ವೆಂಕಟೇಶ್, ಗುಂಡಿನಪಾಳ್ಯ ರಮೇಶ್, ನಟರಾಜ್, ಸೇರಿದಂತೆ ಜೆಡಿಎಸ್ ಪಕ್ಷದ ಮುಖಂಡರು ಇದ್ದರು.
ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


