ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತನ್ನ ಅತ್ಯಂತ ಶಕ್ತಿಶಾಲಿ ಹಾಗೂ ಭಾರವಾದ ‘ಎಲ್‌ವಿಎಂ3-ಎಂ6’ (LVM3–M6) ರಾಕೆಟ್ ಮೂಲಕ ಅಮೆರಿಕದ ‘ಬ್ಲೂಬರ್ಡ್ ಬ್ಲಾಕ್–2’ ಸಂವಹನ ಉಪಗ್ರಹವನ್ನು ಯಶಸ್ವಿಯಾಗಿ ನಭಕ್ಕೆ ಹಾರಿಸಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಬುಧವಾರ ಬೆಳಿಗ್ಗೆ ಈ ಉಡಾವಣೆ ನಡೆಯಿತು. ಸುಮಾರು 6,100 ಕೆ.ಜಿ ತೂಕದ ಈ ಉಪಗ್ರಹವು ಇಸ್ರೊ ಇದುವರೆಗೆ ಹೊತ್ತೊಯ್ದ ಅತ್ಯಂತ ಭಾರದ ಪೇಲೋಡ್ ಆಗಿದೆ.
ಸ್ಮಾರ್ಟ್‌ಫೋನ್ ಗಳಿಗೆ ನೇರವಾಗಿ ಹೈ–ಸ್ಪೀಡ್ 5ಜಿ ಸೆಲ್ಯುಲಾರ್ ಬ್ರಾಡ್ ಬ್ಯಾಂಡ್ ಒದಗಿಸುವುದು ಈ ಉಪಗ್ರಹದ ಮುಖ್ಯ ಉದ್ದೇಶವಾಗಿದೆ.
ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (NSIL) ಮತ್ತು ಅಮೆರಿಕದ ಎಎಸ್‌ಟಿ ಸ್ಪೇಸ್‌ಮೊಬೈಲ್ ನಡುವಿನ ವಾಣಿಜ್ಯ ಒಪ್ಪಂದದ ಭಾಗವಾಗಿ ಈ ಯೋಜನೆ ಕೈಗೊಳ್ಳಲಾಗಿದೆ. ಈ ಯಶಸ್ಸಿನೊಂದಿಗೆ ಇಸ್ರೊ ಜಾಗತಿಕ ವಾಣಿಜ್ಯ ಬಾಹ್ಯಾಕಾಶ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


