ಸರಗೂರು: ಭಾರತದ ಚರಿತ್ರೆಯಲ್ಲಿ ಡಿಸೆಂಬರ್ 25 ಬಹು ಮುಖ್ಯವಾದ ದಿನ. ಅಸ್ಪೃಶ್ಯತೆ, ಶ್ರೇಣೀಕೃತ ಜಾತಿ ಪದ್ಧತಿ, ತಾರತಮ್ಯಗಳ ಅಪಮೌಲ್ಯಗಳನ್ನೇ ಮೌಲ್ಯಗಳನ್ನಾಗಿಸಿ ಭಾರತೀಯ ಸುಪ್ತ ಮನಸ್ಸನ್ನು ಆಳುತ್ತಿರುವ ‘ಮನುಸ್ಮೃತಿ’ ಎಂಬ ‘ಭೂತಕಾಲದ ಸಂವಿಧಾನ’ವನ್ನು ಡಾ.ಬಿ.ಆರ್. ಅಂಬೇಡ್ಕರ್ ಸಾರ್ವಜನಿಕವಾಗಿ ಸುಟ್ಟು ಪ್ರತಿಭಟಿಸಿದ ದಿನ ಎಂದು ಆದಿಕರ್ನಾಟಕ ಮಹಾಸಭಾ ಅಧ್ಯಕ್ಷ ಇಟ್ನ ರಾಜಣ್ಣ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರದಂದು ಸಾಂಕೇತಿಕವಾಗಿ ಆದಿ ಕರ್ನಾಟಕ ಮಹಾಸಭಾ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸರಗೂರಿನ ಪ್ರವಾಸ ಮಂದಿರದಲ್ಲಿ ಹಮ್ಮಿಕೊಂಡಿದ್ದ ಮನುಸ್ಮೃತಿ ಪ್ರತಿಕೃತಿ ದಹನ ಸುಟ್ಟು ಹಾಕಿ ಮಾತನಾಡಿದರು.
ಭಾರತದ ಹಿಂದೂ ಮನಸ್ಸು ಬದಲಾಗಬಹುದು, ಹಿಂದೂ ಧರ್ಮವನ್ನು ಒಳಗಿದ್ದುಕೊಂಡೇ ಸುಧಾರಿಸಬಹುದೇನೋ ಎನ್ನುವ ನಂಬಿಕೆಯಲ್ಲಿ ಮಹಾಡ್, ಚೌಡಾರ್ ಸತ್ಯಾಗ್ರಹಗಳನ್ನು ನಡೆಸಿದರು . ಈ ಮೂಲಕ ಸಾರ್ವಜನಿಕ ಹಣದಲ್ಲಿ ನಿರ್ಮಾಣವಾಗಿರುವ ಕೆರೆಗೆಳು, ಬಾವಿಗಳು, ಧರ್ಮಶಾಲೆಗಳು ಸೇರಿದಂತೆ ಎಲ್ಲ ಸಾರ್ವಜನಿಕ ಸ್ಥಳಗಳು ಎಲ್ಲರಿಗೂ ಮುಕ್ತವಾಗಿರಬೇಕು ಅನ್ನುವ ಕಾಯ್ದೆ ತಂದಿದ್ದರೂ ಅಸ್ಪೃಶ್ಯರಿಗೆ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು.
ಮನುಸ್ಮೃತಿ ಅಳಿಸಲಿ ಸಂವಿಧಾನ ಉಳಿಯಲಿ ಎಂಬ ಚೌಕಟ್ಟಿನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ದೇಶದಲ್ಲಿ ವ್ಯಕ್ತಿ ಗೌರವಕ್ಕೆ ಅಶಾಂತಿಯ ಉಂಟುಮಾಡುತ್ತಿದ್ದ ,ದೇಶದಲ್ಲಿ ಅಸಮಾನತೆಯನ್ನು ಸಾರುತ್ತಿದ್ದ ಮನುಸ್ಮೃತಿ ಎಂಬ ಪಿಡುಗನ್ನು ,1927 ನೇ ಡಿಸೆಂಬರ್ 25 ರಂದು ಸುಟ್ಟು ಹಾಕಿದ್ದರು ಎಂದು ಹೇಳಿದರು.
ಈ ಕಾರ್ಯಕ್ರಮಕ್ಕೆ ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಹೂವಿನ ಕೊಳ ಸಿದ್ದರಾಜು, ಮಹಾಸಭಾ ಉಪಾಧ್ಯಕ್ಷರಾದ ಚಿನ್ನಣ್ಣ ಹಳೆಯೂರು, ಬಿಡಗಲು ಶಿವಣ್ಣ, ಮಹಾಸಭಾದ ಖಜಾಂಚಿ ಲಂಕೆ ಶ್ರೀನಿವಾಸ್, ಸಹಾ ಕಾರ್ಯದರ್ಶಿ ಮಸಹಳ್ಳಿ ಸೂರ್ಯಕುಮಾರ್, ಲೋಕೇಶ್ ಜೆ., ಶಿವಚೆನ್ನಪ್ಪ ಮುಳ್ಳೂರು, ಲಂಕೆ ಸೋಮಶೇಖರ್, ಬಿಲ್ಲಯ್ಯ, ದೇವಲಾಪುರ ನಾಗೇಂದ್ರ, (ಅಂಬೇಡ್ಕರ್ ವಾದ) ತಾಲೂಕು ಸಂಚಾಲಕ ಕೂಡಗಿ ಗೋವಿಂದರಾಜು, ಅಣ್ಣಯ್ಯ ಸ್ವಾಮಿ, ಚಕ್ಕೂರು ಕಾಳಸ್ವಾಮಿ, ದೇವರಾಜು, ಕೃಷ್ಣ, ಶಿವಕುಮಾರ್, ಮಟದಕಟ್ಟೆಮಣಿಕಂಠ, ದಯಾನಂದ, ಚಿನ್ನಸ್ವಾಮಿ, ಭೀಮಯ್ಯ, ಮಹೇಶ್ ಇನ್ನಿತರರು ಭಾಗವಹಿಸಿದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


