ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12ರ ಮನೆಯಲ್ಲಿ ದಿನಕ್ಕೊಂದು ಕುತೂಹಲಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ರಕ್ಷಿತಾ ಮತ್ತು ಗಿಲ್ಲಿ ನಟ ಅವರ ಸ್ನೇಹ ಹಾಗೂ ಕೆಮಿಸ್ಟ್ರಿ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ರಕ್ಷಿತಾ ನೀಡಿರುವ ಒಂದು ಹೇಳಿಕೆ ಈಗ ವೀಕ್ಷಕರಲ್ಲಿ ಹೊಸ ಅನುಮಾನ ಹುಟ್ಟುಹಾಕಿದೆ.
ಏನಿದು ರಕ್ಷಿತಾ ಹೇಳಿಕೆ? ಇತ್ತೀಚೆಗೆ ಸೂರಜ್ ಅವರ ಸಹೋದರಿ ಬಿಗ್ ಬಾಸ್ ಮನೆಗೆ ಭೇಟಿ ನೀಡಿದ್ದಾಗ, “ಬಿಗ್ ಬಾಸ್ ಮನೆಯಲ್ಲಿರುವವರೆಲ್ಲರೂ ನಿನಗೆ ಅಣ್ಣಂದಿರಲ್ಲವೇ?” ಎಂದು ರಕ್ಷಿತಾ ಅವರನ್ನು ಕೇಳಿದರು. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ರಕ್ಷಿತಾ, “ಗಿಲ್ಲಿ ಒಬ್ಬನನ್ನು ಬಿಟ್ಟು ಮನೆಯಲ್ಲಿರುವ ಮಿಕ್ಕವರೆಲ್ಲರೂ ನನಗೆ ಅಣ್ಣಂದಿರು” ಎಂದು ಉತ್ತರಿಸಿದ್ದಾರೆ. ಈ ಮಾತು ಕೇಳಿದ ಮನೆಯ ಸದಸ್ಯರು ಹಾಗೂ ವೀಕ್ಷಕರು ಶಾಕ್ ಆಗಿದ್ದಾರೆ.
ಗಿಲ್ಲಿ ಮೇಲೆ ಪ್ರೀತಿ ಇದೆಯೇ? ರಕ್ಷಿತಾ ಅವರ ಈ ನೇರ ಹೇಳಿಕೆಯಿಂದಾಗಿ, ಗಿಲ್ಲಿ ಮೇಲೆ ಅವರಿಗೆ ಕೇವಲ ಸ್ನೇಹ ಮಾತ್ರವಲ್ಲದೆ ವಿಶೇಷವಾದ ಪ್ರೀತಿ ಇದೆಯೇ ಎನ್ನುವ ಪ್ರಶ್ನೆ ಮೂಡಿದೆ. ಈ ಹಿಂದೆ ಗಿಲ್ಲಿ ಅವರು ನೇರವಾಗಿ “ನೀನು ನನ್ನನ್ನು ಲವ್ ಮಾಡ್ತಿದ್ದೀಯಾ?” ಎಂದು ಕೇಳಿದಾಗ ರಕ್ಷಿತಾ ಕೇವಲ ನಕ್ಕು ಸುಮ್ಮನಾಗಿದ್ದರು. ಆದರೆ ಈಗ ಗಿಲ್ಲಿಯನ್ನು ಮಾತ್ರ ‘ಅಣ್ಣ’ ಎನ್ನಲು ನಿರಾಕರಿಸುವ ಮೂಲಕ ತಮ್ಮ ಮನಸ್ಸಿನ ಇಂಗಿತವನ್ನು ಹೊರಹಾಕಿದ್ದಾರೆ ಎನ್ನಲಾಗುತ್ತಿದೆ. ಆದ್ರೆ ಬಿಗ್ ಬಾಸ್ ನಲ್ಲಿ ಇಂತಹ ವಿಚಾರಗಳು ವೀಕ್ಷಕರಿಗೆ ಹೆಚ್ಚಿನ ಆಸಕ್ತಿ ಸೃಷ್ಟಿಸಲು ನಡೆಸುವ ತಂತ್ರಗಾರಿಕೆಗಳೇ ಎನ್ನುವ ಮಾತುಗಳು ಕೂಡ ಚರ್ಚೆಯಾಗುತ್ತಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


