ತಿಪಟೂರು: ತಾಲ್ಲೂಕಿನ ಕಂಚಿಗಾರನಹಳ್ಳಿ ಗ್ರಾಮದ ನಿವಾಸಿ, ಮೂಳೆಯ ಕ್ಯಾನ್ಸರ್ ನಿಂದ ಬಳಲುತ್ತಿರುವ ಲತಾ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಆರ್ಥಿಕ ಸಹಾಯ ಹಸ್ತಚಾಚಲಾಗಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಲತಾ ಅವರ ಚಿಕಿತ್ಸೆಗಾಗಿ 25 ಸಾವಿರ ರೂಪಾಯಿ ಸಹಾಯಧನವನ್ನು ಮಂಜೂರು ಮಾಡಿದ್ದು, ಈ ಮೊತ್ತದ ಡಿಡಿಯನ್ನು (DD) ಯೋಜನಾಧಿಕಾರಿ ಉದಯ್ ಕೆ. ಅವರು ಸಂತ್ರಸ್ತೆಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯೋಜನಾಧಿಕಾರಿ ಉದಯ್ ಕೆ., “ಆರೋಗ್ಯವು ಭಾಗ್ಯದಂತಿದ್ದು, ಭಗವಂತನು ಲತಾ ಅವರಿಗೆ ಶೀಘ್ರವಾಗಿ ಪೂರ್ಣ ಆರೋಗ್ಯವನ್ನು ಕರುಣಿಸಲಿ” ಎಂದು ಹಾರೈಸಿದರು. ಕಷ್ಟದ ಸಮಯದಲ್ಲಿ ಬಡ ಕುಟುಂಬಗಳಿಗೆ ಆಸರೆಯಾಗುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಹುಚ್ಚಯ್ಯ, ಚಿಕ್ಕಣ್ಣ, ಲೋಕೇಶ್, ವಲಯ ಮೇಲ್ವಿಚಾರಕಿ ರಮ್ಯಾ, ಜ್ಞಾನವಿಕಾಸ ಸಮನ್ವಯಾಧಿಕಾರಿ ಪದ್ಮಾವತಿ, ಸೇವಾಪ್ರತಿನಿಧಿ ಮಂಜುಳಾ ಹಾಗೂ ಧರ್ಮಸ್ಥಳ ಸಂಘದ ಪಾಲುದಾರ ಬಂಧುಗಳು ಉಪಸ್ಥಿತರಿದ್ದು, ಸಂತ್ರಸ್ತ ಕುಟುಂಬಕ್ಕೆ ಧೈರ್ಯ ತುಂಬಿದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


