ತುಮಕೂರು: ಮಾರುತಿ ನಗರದ ನಾಗರಿಕ ಹಿತರಕ್ಷಣಾ ಸಮಿತಿ ಹಾಗೂ ಬಾಂಧವ್ಯ ಮಹಿಳಾ ಇವರ ಸಹಯೋಗದೊಂದಿಗೆ ಅದ್ದೂರಿ ಕನ್ನಡ ರಾಜ್ಯೋತ್ಸವ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಭಾನುವಾರ ಆಯೋಜನೆ ಮಾಡಲಾಗಿತ್ತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾರುತಿ ನಗರ ನಾಗರಿಕ ಹಿತರಕ್ಷಣಾ ಸಮಿತಿಯ ಕಾರ್ಯದರ್ಶಿ ನಾರಾಯಣ ನಾಯ್ಕ ಡಿ. ಅವರು, ಪ್ರತಿವರ್ಷದಂತೆ ಈ ವರ್ಷವೂ ಕೂಡ ನಮ್ಮ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಇಂದು ಮಾಡಲಾಗುತ್ತಿದೆ, ದಯವಿಟ್ಟು ಮಾರುತಿ ನಗರದ ಎಲ್ಲಾ ಸಾರ್ವಜನಿಕರು ಬಂದು ಈ ಅದ್ದೂರಿ ಕನ್ನಡ ರಾಜ್ಯೋತ್ಸವವನ್ನು ಹಾಗೂ ಆರೋಗ್ಯ ತಪಾಸಣಾ ಮಾಡಿಕೊಳ್ಳಬೇಕು ಎಂದು ಸಂಘದ ಪರವಾಗಿ ನಾನು ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದರು.
ಶ್ರೀ ವೆಂಕಟೇಶ್ವರ ಆಸ್ಪತ್ರೆ ವತಿಯಿಂದ ಮೂಳೆ ತಪಾಸಣೆ,ಡಾಕ್ಟರ್ ಅಗರ್ ವಾಲ್ಸ್ ಕಣ್ಣಿನ ಆಸ್ಪತ್ರೆ ವತಿಯಿಂದ ಕಣ್ಣನ ತಪಾಸಣೆ, ಮಧು ಸೂಪರ್ ಸ್ಪೆಷಾಲಿಟಿ ದಂತ ಚಿಕಿತ್ಸಾ ಕೇಂದ್ರ ವತಿಯಿಂದ ದಂತ ತಪಾಸಣೆ, ಜೆ.ಪಿ. ಸ್ಪೆಷಾಲಿಟಿ ಕ್ಲಿನಿಕ್ ವತಿಯಿಂದ ಮಧುಮೇಹ (ಸಕ್ಕರೆ ಖಾಯಿಲೆ) ಮತ್ತು ಬಿ.ಪಿ.ತಪಾಸಣೆ ಶಿಬಿರ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಮಾರುತಿ ನಗರ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಗಜ್ಯೋತಿ ಶ್ರೀ ಸಿದ್ಧರಾಮಯ್ಯ, ಗೌರವ ಅಧ್ಯಕ್ಷ ಎನ್.ಹನುಮಂತಪ್ಪ, ಉಪಾಧ್ಯಕ್ಷ ಗಂಗಯ್ಯ,ಸಹ ಕಾರ್ಯದರ್ಶಿ ಚನ್ನಿಗರಾಯಪ್ಪ,ಸಂಘಟನಾ ಕಾರ್ಯದರ್ಶಿ ರುಕ್ಕಾಂಗದ,ಶ್ರೀ ವೆಂಕಟೇಶ್ವರ ಆಸ್ಪತ್ರೆ ಡಾ.ಕೀರ್ತಿ ಶಿವಲಿಂಗಯ್ಯ, ಡಾಕ್ಟರ್ ಅಗರ್ ವಾಲ್ಸ್ ಕಣ್ಣಿನ ಆಸ್ಪತ್ರೆ ಬಸವೇಶ್ ಎಲ್, ಮಧು ಸೂಪರ್ ಸ್ಪೆಷಾಲಿಟಿ ದಂತ ಡಾ. ಮಧುಸೂದನ್ ಡಿ., ಡಾ.ಅಶ್ವಿನಿ ಎನ್., ಜೆ.ಪಿ. ಸ್ಪೆಷಾಲಿಟಿ ಕ್ಲಿನಿಕ್ ಡಾ.ವಿಜಯ ಕುಮಾರ್, ಸೇರಿ ಸಂಘದ ನಿರ್ದೇಶಕರು ಸಾರ್ವಜನಿಕರು ಭಾಗಿಯಾಗಿದ್ದರು.
ವರದಿ: ನಂದೀಶ್ ನಾಯ್ಕ ಪಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


