ತುಮಕೂರು: ವಿಘ್ನೇಶ್ವರ ಕಂಫರ್ಟ್ಸ್‌ನಲ್ಲಿ 26ನೇ ವಾರ್ಡಿನ ಕಾರ್ಯಕರ್ತರ ಪರಿಚಯ ಸಭೆ ಮತ್ತು ಸುಶಾಸನ ದಿನ ರಾಷ್ಟ್ರ ರಾಜಕೀಯ ಕ್ಷೇತ್ರದ ಶ್ರೇಷ್ಠ ನಾಯಕ ಅಜಾತಶತ್ರು ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ 101 ನೇ ಜಯಂತಿಯನ್ನು ಆಚರಿಸಲಾಯಿತು.
ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಪ್ರದೀಪ್ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಮಾಜಿ ಪ್ರಧಾನಮಂತ್ರಿಗಳಾದ ವಾಜಪೇಯಿ ಅವರ ಆದರ್ಶ ಗುಣಗಳು ಅವರ ಸೈದ್ಧಾಂತಿಕ ನೆಲೆ, ಅವರು ನಡೆದು ಬಂದದಾರಿ ನಮಗೆಲ್ಲರಿಗೂ ಸದಾ ಪ್ರೇರಣೆಯಾಗಿದೆ. ಅವರ ಆದರ್ಶಗಳು ನಮಗೆಲ್ಲರಿಗೂ ದಾರಿದೀಪವಾಗುತ್ತದೆ. ಕವಿಯಾಗಿ ಆದರ್ಶ ವ್ಯಕ್ತಿಯಾಗಿ ಬೇರೆ ಬೇರೆ ಪಕ್ಷದ ರಾಜಕಾರಣಿಗಳಿಗೂ ಇಷ್ಟವಾದ ವ್ಯಕ್ತಿಯಾಗಿ ಎಂದಿಗೂ ಪ್ರಾತ ಸ್ಮರಣೀಯರು, ಕವಿಯಾಗಿ ಉತ್ತಮ ವಾಗ್ಮಿಯಾಗಿ ಸದಾ ರಾಷ್ಟ್ರೀಯತೆಯನ್ನೇ ಉಸಿರಾಗಿಸಿಕೊಂಡಿದ್ದರು ಸದಾಕಾಲವೂ ಕೆಲಸದಲ್ಲಿ ನಿರತವಾಗಿದ್ದು ವಿಚಾರವಂತಿಕೆ ಸಿದ್ಧಾಂತ ಎಲ್ಲವನ್ನು ಮೈಗೂಡಿಸಿಕೊಂಡು ಅದನ್ನೇ ಎಲ್ಲರಿಗೂ ಹಂಚುತ್ತಿದ್ದ ಮೇರು ವ್ಯಕ್ತಿತ್ವದವರು. ಅವರು ಈ ದೇಶದ ಪ್ರಧಾನಮಂತ್ರಿಯಾಗಿದ್ದಾಗ ರಸ್ತೆ ನಿರ್ಮಾಣದಲ್ಲಿ ಮಹತ್ತರ ಕಾರ್ಯವನ್ನು ಮಾಡಿದವರು. ಇಂತಹ ಮಹಾನ್ ವ್ಯಕ್ತಿಯ 101ನೇ ವರ್ಷದ ಜಯಂತಿಯನ್ನು ಆಚರಿಸುತ್ತಿರುವುದು ನಮಗೆಲ್ಲರಿಗೂ ತೃಪ್ತಿದಾಯಕವಾಗಿದೆ. ನಾವುಗಳೆಲ್ಲರೂ ಅವರ ಆಚಾರ ವಿಚಾರಗಳನ್ನು ಆದರ್ಶವಾಗಿ ಇಟ್ಟುಕೊಂಡು ಸಾಗಬೇಕೆಂದ ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಭಾರತೀಯ ಜನತಾ ಪಕ್ಷದ ನಗರ ಅಧ್ಯಕ್ಷರಾದ ಧನುಷ್ ಮಾತನಾಡುತ್ತಾ ಅಟಲ್ ಬಿಹಾರಿ ವಾಜಪೇಯಿ ರವರು ಪ್ರೋಕ್ರಾನ್ ಅಣುಪರೀಕ್ಷೆ ಸುವರ್ಣ ಚತುಷ್ಪದ ಯೋಜನೆ ಮತ್ತು ಪಾಕಿಸ್ತಾನದೊಂದಿಗೆ ಶಾಂತಿ ಮಾತುಕತೆ ಅವರ ಪ್ರಮುಖ ಸಾಧನೆಗಳು ಹಾಗೂ ಸದಾ ವಾಜಪೇಯಿಯವರ ನಾನು ಸಮೃದ್ಧ ಬಲಿಷ್ಠ ಮತ್ತು ಕಾಳಜಿ ಉಳ್ಳ ಭಾರತದ ಕನಸು ಕಾಣುತ್ತಿರುತ್ತೇನೆ ಎಂದು ಯಾವಾಗಲೂ ಎಲ್ಲಾ ಸಭೆಗಳಲ್ಲೂ ಪ್ರತಿಪಾದಿಸುತ್ತಿದ್ದರು. ಸಭೆಯಲ್ಲಿ ನಿಕಟಪೂರ್ವ ಮಹಾನಗರ ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನಯ್ಯ, ರೇಖಾ ಶಿವಕುಮಾರ್, ಮಾಜಿ ನಗರಸಭಾ ಸದಸ್ಯರಾದ ನಿರಂಜನ್, ವಿರೂಪಾಕ್ಷಪ್ಪ, ಜ್ಯೋತಿ ಅವರು ಮಾತನಾಡಿದರು.
ಸಭೆಯಲ್ಲಿ ಮುದ್ದುರಾಜ್ ಕಾರ್ಯಕ್ರಮ ನಿರೂಪಿಸಿದರು. ಕಂಚಿಗರಾಯಪ್ಪ, ಕೊಪ್ಪಳ ನಾಗರಾಜ್, ವೆಂಕಟೇಶಯ್ಯ, ದೇವರಾಜು, ವಿಶ್ವಮೂರ್ತಿ, ರಾಮಸ್ವಾಮಿ, ಗಂಗರುದ್ರಯ್ಯ, ವೇಣುಗೋಪಾಲ್, ವೆಂಕಟೇಶ್, ಪಾಣಿ ಪ್ರಸನ್ನ, ಉಮೇಶ್ ಬಾಬು, ಮಮತಾ ನಟರಾಜು, ರವಿ ಮತ್ತು 26ನೇ ವಾರ್ಡಿನ ಬೂತ್ ಅಧ್ಯಕ್ಷರುಗಳು ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರುಗಳು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


