ಬೀದರ್: ಜಿಲ್ಲೆಯ ಔರಾದ್ ತಾಲೂಕಿನ ಸಂತಪುರ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಇಂದು ವೈದ್ಯಾಧಿಕಾರಿ ಡಾ. ರತಿಕಾಂತ್ ವಿ. ಸ್ವಾಮಿ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರವು ಅತ್ಯಂತ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂತಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೇಣುಕಾ ಚಂದ್ರಕಾಂತ, “ರಕ್ತ ಎನ್ನುವುದು ಕೃತಕವಾಗಿ ಸಿದ್ಧಪಡಿಸಲು ಸಾಧ್ಯವಿಲ್ಲದ ಏಕೈಕ ಅಮೂಲ್ಯ ವಸ್ತು. ತುರ್ತು ಚಿಕಿತ್ಸೆ, ಶಸ್ತ್ರಚಿಕಿತ್ಸೆ ಹಾಗೂ ಅಪಘಾತಗಳಂತಹ ಸಂದಿಗ್ಧ ಸಮಯದಲ್ಲಿ ರಕ್ತವು ಸಂಜೀವಿನಿಯಂತೆ ಕೆಲಸ ಮಾಡುತ್ತದೆ. ಪ್ರತಿಯೊಬ್ಬರೂ ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಪುಣ್ಯದ ಕೆಲಸದಲ್ಲಿ ಭಾಗಿಗಳಾಗಬೇಕು,” ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಸಂತೋಷ್ ಮಾತನಾಡಿ, “ರಕ್ತದಾನ ಮಾಡುವುದರಿಂದ ಒಬ್ಬ ಸಾಮಾನ್ಯ ಮನುಷ್ಯ ಕೂಡ ದೇವರಾಗುವ ಅವಕಾಶ ಲಭಿಸುತ್ತದೆ. ಇಂತಹ ಸಾಮಾಜಿಕ ಕಾಳಜಿಯ ಕಾರ್ಯಕ್ರಮಗಳಿಗೆ ಪಂಚಾಯತ್ ವತಿಯಿಂದ ಸದಾ ಬೆಂಬಲ ನೀಡಲಾಗುವುದು,” ಎಂದರು.
ಆರೋಗ್ಯಕ್ಕೆ ರಕ್ತದಾನ ಪೂರಕ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ರತಿಕಾಂತ್ ವಿ. ಸ್ವಾಮಿ ಅವರು ರಕ್ತದಾನದ ಆರೋಗ್ಯಕರ ಲಾಭಗಳ ಕುರಿತು ಮಾಹಿತಿ ನೀಡಿದರು. “18 ವರ್ಷ ಮೇಲ್ಪಟ್ಟ ಲಿಂಗಭೇದವಿಲ್ಲದೆ ಯಾರು ಬೇಕಾದರೂ ರಕ್ತದಾನ ಮಾಡಬಹುದು. ನಿರಂತರ ರಕ್ತದಾನ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ಮುಂದಿನ ದಿನಗಳಲ್ಲಿ ಇಂತಹ ಮತ್ತಷ್ಟು ಶಿಬಿರಗಳನ್ನು ಆಯೋಜಿಸಲಾಗುವುದು,” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅರ್ ಸಿ ಹೆಚ್ ಓ ಅಧಿಕಾರಿಗಳಾದ ಡಾ.ರಾಜಶೇಖರ ಪಾಟೀಲ, ಡಾ.ಶರಣಯ್ಯ ಸ್ವಾಮಿಯವರು ಭಾಗವಹಿಸಿದರು. ಚಂದ್ರಕಾಂತ ಬಿಜಲೊಡೆ, ಡಾ.ವಾಜಿದ್, ಡಾ.ವೇರೇಶ, ಡಾ.ಸಿದ್ದಾರಡ್ಡಿ, ಡಾ.ಸಂಗಮೇಶ, ಡಾ.ರೇಣುಕಾ ನಾಗರಾಳಕರ್, ಡಾ.ಆಶಾರಾಣಿ, ಮಂಜು ಸ್ವಾಮಿ, ತುಕಾರಾಮ ಹಸನ್ಮುಖಿ, ಹೆಡಗಾಪುರ ಪಿಡಿಓ ಶರಣಪ್ಪ, ರಾಜು ಹೆಬ್ಬಾಳೆ ಮುಂತಾದವರು ಪಾಲ್ಗೊಂಡಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


