ತುಮಕೂರು: ಮನೆಯ ಹಕ್ಕು ಪತ್ರ ನೀಡುವಲ್ಲಿ ತಾರತಮ್ಯ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ಯಾತ್ಸಂದ್ರದ ಎಳ್ಳಾರಬಂಡೆಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಹೊರವಲಯದಲ್ಲಿರುವ ಕ್ಯಾತ್ಸಂದ್ರದಲ್ಲಿರುವ ಎಳ್ಳಾರ ಬಂಡೆ, ಮಾರುತಿ ನಗರ, ಇಂದಿರಾ ನಗರ, ವಾರ್ಡ್ ನಂಬರ್ 34ರಲ್ಲಿ ಕಳೆದ 40 ವರ್ಷಗಳಿಂದ ಇದೇ ಗ್ರಾಮಗಳಲ್ಲಿ ವಾಸವಾಗಿದ್ದು, ಸದರಿ 40 ಗ್ರಾಮಸ್ಥರುಗಳಿಗೆ ಖಾತೆ ಮಾಡಿಕೊಟ್ಟು ಹಕ್ಕು ಪತ್ರಗಳನ್ನು ಪಾಲಿಕೆ ನೀಡಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಇನ್ನುಳಿಕೆ 40 ಗ್ರಾಮಸ್ಥರಿಗೆ ಯಾವುದೇ ಹಕ್ಕು ಪತ್ರ ನೀಡಿಲ್ಲ. ಒಂದು ಮನೆಗಳಿಗೆ ಪಾಲಿಕೆಯು 3, 4 ಹಕ್ಕುಪತ್ರಗಳನ್ನು ನೀಡಿ ನಮಗೆ ಅನ್ಯಾಯ ಮಾಡಿದ್ದಾರೆ ಎಂದು ವಂಚನೆಗೆ ಒಳಗಾಗಿರುವವರು ಪಾಲಿಕೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆಯನ್ನು ನಿವಾರಿಸಬೇಕೆಂದು ಕೋರಿ ಮಾಜಿ ಸಚಿವ ಕೆ.ಎನ್. ರಾಜಣ್ಣರವರಿಗೆ, ಶಾಸಕ ಜ್ಯೋತಿಗಣೇಶ್‌ರವರಿಗೆ ಹಾಗೂ ಪಾಲಿಕೆ ಆಯುಕ್ತರಿಗೂ ಮನವಿ ಸಲ್ಲಿಸಿದ್ದಾಗಿ ಎಳ್ಳಾರಬಂಡೆಯ ಮುಖಂಡ ಜಯಸಿಂಹ ತಿಳಿಸಿದ್ದಾರೆ. ತಮ್ಮ ಸಮಸ್ಯೆಯನ್ನು ಪಾಲಿಕೆ ಸರಿಪಡಿಸದಿದ್ದರೆ ಲೋಕಾಯುಕ್ತಕ್ಕೂ ಹೋಗಲು ಸಿದ್ಧವಿರುವುದಾಗಿ ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


