ಪಾವಗಡ: ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ದಿಯೇ ಶಿಕ್ಷಣ ಎಂದು ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಹಾಗೂ ಖ್ಯಾತ ವೈದ್ಯ ಡಾ.ಜಿ.ವೆಂಕಟರಾಮಯ್ಯ ತಿಳಿಸಿದರು
ಪಟ್ಟಣದ ಸ್ವಾಮಿ ವಿವೇಕಾನಂದ ಕಾಲೇಜು ಅವರಣದಲ್ಲಿ ಶುಕ್ರವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ, ಪಾವಗಡ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ ಪಾವಗಡ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಪಾವಗಡ ಇವರ ಸಂಯುಕ್ತಾಶ್ರಯದಲ್ಲಿ 2025–26 ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ರಸಪ್ರಶ್ನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಾವಗಡ ತಾಲ್ಲೂಕು ಬರಪೀಡಿತ, ಹಿಂದುಳಿದ ತಾಲ್ಲೂಕು ಎಂದು ಹಣೆಪಟ್ಟಿ ಪಡೆದಿದ್ದು, ಇಂತಹ ಪ್ರದೇಶದಲ್ಲಿ ಇಲ್ಲಿನ ಮಕ್ಕಳು ಕಡಿಮೆ ಖರ್ಚಿನಲ್ಲಿ ಉತ್ತಮ ವ್ಯಾಸಂಗ ಮಾಡಲಿ ಎಂಬ ಉದ್ದೇಶವಿರಿಸಿಕೊಂಡು ನಾನು ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದೆ, ಕಳೆದ ಹಲವಾರು ವರ್ಷ ಗಳಿಂದ ತಾಲ್ಲೂಕಿನ ಮಕ್ಕಳಿಗೆ ಉತ್ತಮ ಶಿಕ್ಷಣ ಸೇವೆ ನೀಡಿದ ತೃಪ್ತಿ ನನಗಿದೆ, ಈ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ನೂರಾರು ಮಕ್ಕಳು ಉತ್ತಮ ಭವಿಷ್ಯವನ್ನು ರೂಪಿಸಿಕೊಂಡು ಉನ್ನತ ಸ್ಥಾನ ಮಾನಗಳನ್ನು ಆಲಂಕರಿಸಿದ್ದಾರೆ , ಇದರಿಂದಾಗಿ ಇನ್ನಷ್ಟು ಸಮಾಜಮುಖಿ ಕಾರ್ಯ ಕೈಗೊಳ್ಳಲು ಸ್ಪೂರ್ತಿ ಸಿಕ್ಕಿದಂತಾಗಿದೆ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರೇಣುಕಮ್ಮ ಮಾತನಾಡಿ, ವಿದ್ಯೆಯು ಸಾಧಕನ ಸ್ವತ್ತೇ ಹೊರತು ಸೋಮಾರಿಗಳ ಸ್ವತ್ತಲ್ಲ, ಸಾಧಿಸುವ ಛಲ ವಿದ್ಯಾರ್ಥಿಗಳಲ್ಲಿ ಇರಬೇಕು, ಸಮಯವನ್ನು ವ್ಯರ್ಥ ಮಾಡದೇ ಶ್ರಮ ವಹಿಸಿ ಅಧ್ಯಯನ ನಡೆಸಬೇಕು ಎಂದು ತಿಳಿಸಿದರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಟ್ಟಾ ನರಸಿಂಹಮೂರ್ತಿ ಮಾತನಾಡಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಇಂತಹ ರಸಪ್ರಶ್ನೆ ಕಾರ್ಯಕ್ರಮಗಳು ಪರೀಕ್ಷಾ ದೃಷ್ಠಿಯಿಂದ ಅತ್ಯುಪಯುಕ್ತವಾಗಿವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿ ಉನ್ನತ ಸ್ಥಾನ ಅಲಂಕರಿಸಿದ ಸಾಧಕರಿಗೆ ಸನ್ಮಾನ ಮಾಡಲಾಯಿತು.
ರಸಪ್ರಶ್ನೆ ಕಾರ್ಯಕ್ರಮದಲ್ಲಿ ಕನ್ನಡ ಮಾದ್ಯಮ ವಿಭಾಗದಲ್ಲಿ ಗುಂಡಾರ್ಲಹಳ್ಳಿ ಪ್ರೌಢಶಾಲೆ ಪ್ರಥಮ, ಜಿ.ಎಚ್.ಎಸ್. ವೈ.ಎನ್. ಹೊಸಕೋಟೆ ದ್ವಿತೀಯ, ಎಸ್.ವಿ.ಜಿ.ಎಚ್.ಎಸ್. ಪಾವಗಡ ತೃತೀಯ ಬಹುಮಾನ, ಆಂಗ್ಲ ಮಾಧ್ಯಮ ವಿಭಾಗದಲ್ಲಿ ಸಹನಾ ಕಾನ್ವೆಂಟ್ ಪ್ರಥಮ, ಅಂತ್ಯೋದಯ ಪ್ರೌಢಶಾಲೆ ದ್ವಿತೀಯ, ವಿ.ಎಸ್.ಕಾನ್ವೆಂಟ್ ತೃತೀಯಬಹುಮಾನ ಪಡೆದ ಶಾಲೆಗಳಾಗಿವೆ,
ಕಾರ್ಯಕ್ರಮದಲ್ಲಿ ಸಂಸ್ಥೆಯ ಅದ್ಯಕ್ಷಣಿ ಲಕ್ಷ್ಮಿ ವೆಂಕಟರಾಮಯ್ಯ, ಉಪಾಧ್ಯಕ್ಷ ಡಾ.ಜಿ.ವಿ.ಶಶಿಕಿರಣ್, ಕ್ಷೇತ್ರ ಸಂಪನ್ಮೂಲ ಸಮನ್ವಾಯಾಧಿಕಾರಿ ವೆಂಕಟೇಶಪ್ಪ, ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ನಾಗೇಂದ್ರ, ಉಪಪ್ರಾಂಶುಪಾಲ ನಾಗರಾಜ್, ಪದವಿ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್, ಶಿಕ್ಷಣ ಸಂಯೋಜಕ ಹಾಗೂ ನೋಡೆಲ್ ಅಧಿಕಾರಿ ಖಾಜಾ ಹುಸೇನ್, ಶ್ರೀ ವೆಂಕಟೇಶ್ವರ ಸ್ಕೂಲ್ ಆಫ್ ನರ್ಸಿಂಗ್, ಶೈಲಜಾ ಹಾಗೂ ಪಾವಗಡ ತಾಲ್ಲೂಕಿನ ಎಲ್ಲಾ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಸ್ವಾಮಿ ವಿವೇಕಾನಂದ ಕಾಲೇಜಿನ ಬೋಧಕ, ಬೋಧಕೇತರಸಿಬ್ಬಂದಿ ವರ್ಗದವರು ಹಾಜರಿದ್ದರು.
ವರದಿ: ನಂದೀಶ್ ನಾಯ್ಕ ಪಿ., ಪಾವಗಡ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


