ಸರಗೂರು: ದಿನನಿತ್ಯ ದೇಹವನ್ನು ಸ್ವಚ್ಛಗೊಳಿಸುವ ಹಾಗೆ ದಂತ(ಹಲ್ಲು)ವನ್ನು ಸ್ವಚ್ಛಗೊಳಿಸಬೇಕು, ದಿನಕ್ಕೆರಡು ಬಾರಿ ದಂತವನ್ನು ಸ್ವಚ್ಛಗೊಳಿಸಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ ತಿಳಿಸಿದರು.
ತಾಲ್ಲೂಕಿನ ಹಾದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಗಲಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹೆಚ್.ಡಿ.ಕೋಟೆ ಮತ್ತು ಸಾರ್ವಜನಿಕ ಆಸ್ಪತ್ರೆ ಹೆಚ್.ಡಿ.ಕೋಟೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಬಡಗಲಪುರ ಸಹಯೋಗದೊಂದಿಗೆ ,ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸೆ ಶಿಬಿರ ಹಾಗೂ ಬಾಯಿ ಆರೋಗ್ಯ ಕಾರ್ಯ ಕ್ರಮವನ್ನು ಗುರುವಾರ ದಂದು ಆಯೋಜಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಶಿಬಿರ ವನ್ನು ನಿಮಗಾಗಿ ಆಯೋಜನೆ ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ವರ್ಷ ವಿಶ್ವಬಾಯಿ ಆರೋಗ್ಯ ದಿನಾಚರಣೆಯ ಸಂದರ್ಭದಲ್ಲಿ ಒಂದು ಘೋಷವಾಕ್ಯ ಬಿಡುಗಡೆ ಮಾಡುತ್ತದೆ. (ಸಂತೋಷದ ಬಾಯಿ, ಸಂತೋಷದ ದೇಹ) ಇದರ ಅರ್ಥ ಏನೆಂದರೆಬಾಯಿ ಆರೋಗ್ಯದಿಂದ ಇದ್ದರೆ ಸಂತೋಷ ವಾಗಿರುತ್ತದೆ ,ಬಾಯಿ ಸಂತೋಷ ವಾಗಿದ್ದರೆ, ದೇಹವು ಸಹ ಸಂತೋಷವಾಗಿರುತ್ತದೆ ,ಆದುದರಿಂದ ನಾವೆಲ್ಲರೂ ಬಾಯಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಬಾಯಿ ಆರೋಗ್ಯ ಉತ್ತಮ ರೀತಿಯಲ್ಲಿ ಕಾಪಾಡಿಕೊಂಡು ನಮ್ಮ ದೈಹಿಕ ಆರೋಗ್ಯವನ್ನು ಸಹ ಉತ್ತಮವಾದ ರೀತಿಯಲ್ಲಿ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.
ಅದ್ದುದರಿಂದ ಹೆಚ್ಚಿನ ಜನರು ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂದರ್ಭದಲ್ಲಿ ತಿಳಿಸಿದರು.
ನಂತರ ಈ ಕಾರ್ಯಕ್ರಮವನ್ನು ಉದ್ದೇಶಿಸಿ ಸಾರ್ವಜನಿಕ ಆಸ್ಪತ್ರೆ ದಂತ ತಜ್ಞ ರಾದ ಡಾ”ಸಮೀ ವುಲ್ಲಾ ಶರೀಫ್ ರವರು ಮಾತನಾಡಿ. ,ಇದರ ಮುಖ್ಯ ಉದ್ದೇಶ ಜನರಿಗೆ ಬಾಯಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಬಾಯಿ ಆರೋಗ್ಯದ ಮಹತ್ವವನ್ನು ತಿಳಿಸಿಕೊಡುವುದು.
ನಮ್ಮ ಬಾಯಿ ನಮ್ಮ ದೈಹಿಕ ಆರೋಗ್ಯಕ್ಕೆ ಕನ್ನಡಿ ಇದ್ದ ಹಾಗೆ ಏಕೆಂದರೆ ಅನೇಕ ಕಾಯಿಲೆಗಳ ರೋಗಲಕ್ಷಣಗಳು ಮೊದಲಿಗೆ ಬಾಯಲ್ಲಿ ಕಾಣಿಸಿಕೊಳ್ಳುತ್ತವೆ, ಒಬ್ಬ ವ್ಯಕ್ತಿಯ ಬಾಯಿಯನ್ನು ಪರೀಕ್ಷಿಸಿ ಅವನು ಎಷ್ಟು ಆರೋಗ್ಯಕರವಾಗಿದ್ದಾನೆಂದು ಗುರುತಿಸಬಹುದು ,ನಾವು ಸೇವಿಸುವ ಆಹಾರವು ಎಷ್ಟೇ ಶುಚಿಯಾಗಿದ್ದು ಎಷ್ಟೇ ಪೌಷ್ಟಿಕಾಂಶದಿಂದ ಕೂಡಿದರು, ನಮ್ಮ ಬಾಯಿ ಆರೋಗ್ಯಕರವಾಗಿಲ್ಲದಿದ್ದರೆ ನಮ್ಮ ಬಾಯಿ ಯಲ್ಲಿನ ಕ್ರಿಮಿ ಕೀಟಗಳೊಂದಿಗೆ ಆಹಾರ ನಮ್ಮ ದೇಹಕ್ಕೆ ಸೇರಿ ನಮಗೆ ಅನೇಕ ಕಾಯಿಲೆಗಳು ಬರುವ ಸಂಭವವಿರುತ್ತದೆ ,ನಾವು ಪ್ರತಿನಿತ್ಯ ಎರಡು ಬಾರಿ ಹಲ್ಲನ್ನು ಸ್ವಚ್ಛಗೊಳಿಸಬೇಕು .ಬಿಡಿ ,ಸಿಗರೇಟ್, ತಂಬಾಕು, ಸೇವನೆಯಿಂದ ದೂರವಿರಬೇಕು, ಇದರಿಂದ ಬಾಯಿ ಕ್ಯಾನ್ಸರ್ ಬರುವ ಸಂಭಾವನೆ ಬಹಳ ಹೆಚ್ಚು ದುಶ್ಚಟಗಳಿಂದ ದೂರವಿದ್ದು ಬಾಯಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ನಂತರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ” ರೋಹನ ರವರು ಹಲ್ಲಿನ ನೋವು ಮತ್ತು ದಂತ ಭಾಗ್ಯದ ಬಗ್ಗೆ ವಿವರ ವಾಗಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ರೋಹನ್, ಎನ್ ಟಿಇಪಿ ಸಿಬ್ಬಂದಿಗಳಾದ ನಾಗರಾಜು, ಉಮೇಶ್, ಸಮುದಾಯ ಆರೋಗ್ಯಧಿಕಾರಿ ಮಹೇಶ, ಆರೋಗ್ಯ ಸುರಕ್ಷಾಧಿಕಾರಿ, ಜಯಶ್ರೀ, ಸಾರ್ವಜನಿಕರು ,ಇನ್ನಿತರರು, ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


