ತಿಪಟೂರು: ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮದ ಭಕ್ತರು ಸತತ 9ನೇ ವರ್ಷವೂ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಹಮ್ಮಿಕೊಂಡಿದ್ದು, ಅವರ ಈ ಭಕ್ತಿ ಮಾರ್ಗಕ್ಕೆ ತಾಲ್ಲೂಕು ಯೋಜನಾಧಿಕಾರಿಗಳಾದ ಉದಯ್ ಕೆ. ಹಾರ್ದಿಕ ಶುಭ ಹಾರೈಸಿದರು.
ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಯೋಜನಾಧಿಕಾರಿಗಳು, “ಹಿಂದಿನ ಕಾಲದಲ್ಲಿ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದರ್ಶನಕ್ಕೆ ತೆರಳುವುದೆಂದರೆ ಅದೊಂದು ಪವಿತ್ರ ಕಾರ್ಯವಾಗಿತ್ತು. ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗುತ್ತಿತ್ತು. ಆದರೆ ಇಂದಿನ ವೇಗದ ಬದುಕಿನಲ್ಲಿ ಭಕ್ತಿ ಮತ್ತು ಸಂಪ್ರದಾಯಗಳು ಮಾಸುತ್ತಿವೆ. ಇಂತಹ ಸಮಯದಲ್ಲಿ ಇತಿಹಾಸವನ್ನು ಮರುಕಳಿಸುವಂತೆ ಮತ್ತಿಹಳ್ಳಿ ಗ್ರಾಮಸ್ಥರು ಸುಮಾರು 165 ಕಿಲೋ ಮೀಟರ್ ದೂರವನ್ನು ಕೇವಲ ಮೂರು-ನಾಲ್ಕು ದಿನಗಳಲ್ಲಿ ಕ್ರಮಿಸಿ ಭಗವಂತನ ಆಶೀರ್ವಾದ ಪಡೆಯಲು ಹೊರಟಿರುವುದು ಶ್ಲಾಘನೀಯ,” ಎಂದರು.
ಪಾದಯಾತ್ರಿಗಳು ಸರಿಸುಮಾರು 165 ಕಿ.ಮೀ ಕಾಲ್ನಡಿಗೆಯ ಪ್ರಯಾಣ ಮಾಡಲಿದ್ದಾರೆ. ಈ ಪಾದಯಾತ್ರೆ ತಾಲ್ಲೂಕು ಮತ್ತು ರಾಜ್ಯದ ಜನತೆಗೆ ಮಾದರಿಯಾಗಿದೆ ಎಂದು ಉದಯ್ ಕೆ. ಹರ್ಷ ವ್ಯಕ್ತಪಡಿಸಿದರು
ಈ ಸಂದರ್ಭದಲ್ಲಿ ಮತ್ತಿಹಳ್ಳಿ ಗ್ರಾಮ ಪಂಚಾಯತಿ ಸದಸ್ಯರಾದ ಹರೀಶ್ ಕುಮಾರ್ ಸೇರಿದಂತೆ ಗ್ರಾಮದ ಹಿರಿಯರು ಮತ್ತು ಯುವಕರು ಭಾಗವಹಿಸಿದ್ದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


