ತಿಪಟೂರು: ಟ್ಯೂಷನ್ ಗೆ ಹೋಗಿದ್ದ ಬಾಲಕ ನಾಪತ್ತೆಯಾಗಿದ್ದ ಪ್ರಕರಣ ಸುಖಾಂತ್ಯವಾಗಿದ್ದು, ಕೊನೆಗೂ ನಾಪತ್ತೆಯಾಗಿದ್ದ ಬಾಲಕ ತಾಯಿ ಮಡಿಲು ಸೇರಿದ್ದಾನೆ.
ಮಾಹಿತಿಗಳ ಪ್ರಕಾರ ಮನೆಯಲ್ಲಿ ಬೈದರು ಎಂದು ನೊಂದುಕೊಂಡಿದ್ದ ಬಾಲಕ ಟ್ಯೂಷನ್ ಗೆಂದು ಮನೆಯಿಂದ ಹೊರಟ ನಂತರ ತನ್ನ ಸೈಕಲ್ ನ್ನು ಬೇರೆ ಸ್ಥಳದಲ್ಲಿ ನಿಲ್ಲಿಸಿ, ರೈಲಿನ ಮೂಲಕ ಬೆಂಗಳೂರು ರೈಲು ಹತ್ತಿದ್ದಾನೆ. ನಂತರ ಆತನಿಗೆ ಅಲ್ಲಿ ಏನೂ ಗೊತ್ತಾಗದ ಕಾರಣ, ವಾಪಸ್ ಬಂದಿದ್ದು ತಾಯಿಯ ಮಡಿಲು ಸೇರಿದ್ದಾನೆ ಎಂದು ತಿಳಿದು ಬಂದಿದೆ.
ಇನ್ನೂ ಬಾಲಕ ನಾಪತ್ತೆಯಾದ ಬೆನ್ನಲ್ಲೇ ನಮ್ಮ ತುಮಕೂರು ವರದಿ ಮಾಡಿತ್ತು. ವರದಿಯ ಬೆನ್ನಲ್ಲೇ ಸಾರ್ವಜನಿಕರು ಸಾಕಷ್ಟು ಸಂಖ್ಯೆಯಲ್ಲಿ ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡು ಬಾಲಕನನ್ನು ಹುಡುಕುವ ಪ್ರಯತ್ನಕ್ಕೆ ಕೈಜೋಡಿಸಿ ಮಾನವೀಯತೆ ಮೆರೆದಿದ್ದಾರೆ.
ಬಾಲಕನ ನಾಪತ್ತೆಯಿಂದ ಕಂಗಾಲಾಗಿದ್ದ ಪೋಷಕರು, ಇದೀಗ ಬಾಲಕ ಪತ್ತೆಯಾದ ಬೆನ್ನಲ್ಲೇ ನಿರಾಳರಾಗಿದ್ದಾರೆ.
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


