ತುಮಕೂರು: ಮಹಾನಗರಪಾಲಿಕೆಯ 2026–27ನೇ ಸಾಲಿನ ಆಯವ್ಯಯವನ್ನು ಸಿದ್ಧಪಡಿಸುವ ಕುರಿತು ಸಲಹೆ ಸೂಚನೆ ನೀಡಲು ಜನವರಿ 20ರಂದು ಬೆಳಗ್ಗೆ 11.30 ಗಂಟೆಗೆ ಮಹಾನಗರಪಾಲಿಕೆ ಹೊಸ ಸಭಾಂಗಣದಲ್ಲಿ ಸಭೆಯನ್ನು ಏರ್ಪಡಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಸಭೆಗೆ ಮಹಾನಗರಪಾಲಿಕೆ ವ್ಯಾಪ್ತಿಯ ಸಂಘ ಸಂಸ್ಥೆಗಳ ಪದಾಧಿಕಾರಿ, ಹೋಟೆಲ್ ಅಸೋಸಿಯೇಷನ್, ಛತ್ರಗಳ ಮಾಲೀಕರ ಸಂಘ, ಸಿನಿಮಾ ಮಂದಿರಗಳ ಮಾಲೀಕರ ಸಂಘ, ಶಿಕ್ಷಣ ಸಂಸ್ಥೆಯ ಸಂಘ, ನರ್ಸಿಂಗ್ ಹೋಮ್ಸ್ ಸಂಘಗಳ ಪದಾಧಿಕಾರಿಗಳು, ವಕೀಲರ ಅಸೋಸಿಯೇಷನ್, ನಾಗರಿಕ ಹಿತರಕ್ಷಣಾ ಸೇವಾ ಸಮಿತಿ, ಸರ್ಕಾರೇತರ ಸಂಘ ಸಂಸ್ಥೆಗಳು, ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿ ಅಮೂಲ್ಯವಾದ ಸಲಹೆಗಳನ್ನು ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.
ನಮ್ಮತುಮಕೂರಿನಕ್ಷಣಕ್ಷಣದಸುದ್ದಿಗಳನ್ನುನಿರಂತರವಾಗಿಪಡೆಯಲುನಿಮ್ಮವಾಟ್ಸಾಪ್ಗ್ರೂಪ್ಗೆ 8123382149 ಸಂಖ್ಯೆಯನ್ನುಸೇರಿಸಿ.
ಗ್ರೂಪ್ಗೆಜಾಯಿನ್ಆಗಿ: https://chat.whatsapp.com/ISmeQjik4LbG9KvWhKlbCC


