ತುರುವೇಕೆರೆ: 6.5 ಟಿಎಂಸಿ ನೀರು ಕುಣಿಗಲ್ ಕಡೆ ಹರಿಯುತ್ತಿದೆ, ಈ ನೀರು ಎಲ್ಲಿಗೆ ಹೋಗುತ್ತೆ ಮೊದಲು ರಾಜ್ಯದ ಜನತೆ ಮುಂದೆ ಹೇಳಿ, ಕೇವಲ ಕೃಷ್ಣಪ್ಪ ಸುರೇಶ್ ಗೌಡ ಮಾತ್ರ ಹೋರಾಟ ಮಾಡುತ್ತಿಲ್ಲ ಡಿಕೆಶಿ ಅವರೇ, ಇದು ಈ ಜಿಲ್ಲೆಯ 24 ಲಕ್ಷ ಜನತೆಯ ಹೋರಾಟ, ನಿಮಗೆ ಇದು ತಿಳಿದಿರಲಿ ಎಂದು ತುರುವೇಕೆರೆ ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.
ಕುಣಿಗಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಮಾವತಿ ಲಿಂಕ್ ಕೆನಾಲ್ ಕುರಿತು ಡಿ.ಕೆ.ಶಿವಕುಮಾರ್ ರವರು ಪ್ರಸ್ತಾಪಿಸಿ, ಅಂದಾಜು ಒಂದು ಸಾವಿರ ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಆದರೆ ಕುಣಿಗಲ್ ಕೆರೆಗೆ ಹೇಮಾವತಿ ಕೆನಾಲ್ ಮೂಲಕ ನೀರು ತರಲು ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಮತ್ತು ಸುರೇಶ್ ಗೌಡ ಇದಕ್ಕೆ ವಿರೋಧಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಪತ್ರಿಕಾಗೋಷ್ಠಿಯಲ್ಲಿ ಶಾಸಕರು ಉತ್ತರಿಸಿದರು.
ಹೌದು ಸ್ವಾಮಿ ಡಿಕೆಶಿ ಅವರೇ ನಾವು ವಿರೋಧ ಮಾಡುತ್ತೇವೆ ಇದು ನೂರಕ್ಕೆ ನೂರು ಸತ್ಯ ಇದರಲ್ಲಿ ಯಾವುದೇ ರಾಜಕೀಯ ಅಥವಾ ರಾಜಿ ಖಂಡಿತಾ ಇಲ್ಲ ಎಂದ ಕೃಷ್ಣಪ್ಪ ನೀವು ಏನೇ ಹೇಳಿದರೂ ಸಹ ನಮ್ಮ ಹೋರಾಟ ನಿಲ್ಲುವುದಿಲ್ಲ, ಹೋರಾಟ ಮಾತ್ರ ಮಾಡಿಯೇ ತೀರುತ್ತೇವೆ, ಇದಲ್ಲದೆ ನೀವು ವೈ.ಕೆ.ಹುಚ್ಚುಮಾಸ್ತಯ್ಯ ಕುರಿತು ಸಹ ಮಾತನಾಡಿದ್ದೀರಾ, ಆದರೆ ಅವರ ಹೋರಾಟಕ್ಕೆ ನೀವುಗಳು ಬೆಲೆ ಕೊಟ್ಟಿದ್ದೀರಾ? ಅವರ ಹೋರಾಟ ತುಮಕೂರು ಜಿಲ್ಲೆಗೆ ನೀರು ತರಲೇ ಬೇಕೆಂಬುದು ಹೋರಾಟವಾಗಿತ್ತು, ಆದರೆ ನೀವುಗಳು ರೈತರ ಹಿತ ಹಾಳು ಮಾಡಲು ಹೊರಟಿದ್ದೀರಾ, ನಿಮಗೆ ವೈ.ಕೆ.ಹುಚ್ಚು ಮಾಸ್ತಯ್ಯ ಅವರ ಹೆಸರು ಹೇಳಲು ನೈತಿಕತೆ ಇಲ್ಲ ಎಂದು ತಿರುಗೇಟು ನೀಡಿದರು.
ತಾವು ಗುಬ್ಬಿ ವಾಸು ಕುರಿತು ಮಾತನಾಡಿದ್ದೀರಾ, ಅದು ನಿಮ್ಮ ಧರ್ಮ ಮಾತನಾಡಿಕೊಳ್ಳಿ, ಅವರು ಧರ್ಮತ್ಮ ಇದರಲ್ಲಿ ನಮ್ಮ ಅಭ್ಯಂತರವೇನಿಲ್ಲ, ಆದರೆ ನನ್ನ ಕ್ಷೇತ್ರ ಸಿಎಸ್ ಪುರ ಅದನ್ನು ನಾನು ಬಲಿಕೊಡಲು ತಯಾರಿಲ್ಲ. ನಾನು ನನ್ನ ಜನದ ಹಿತ ಕಾಪಾಡಿಕೊಳ್ಳಲೇಬೇಕು, ಹಾಗಾಗಿ ನಾವು ಮಾತ್ರ ನನ್ನ ಕ್ಷೇತ್ರದ ನೀರನ್ನು ನಾನು ಕೊಡುವುದಿಲ್ಲ ಹೋರಾಟ ಮಾಡಿಯೇ ತೀರುತ್ತೇನೆ ಎಂದರು.
ಗುಬ್ಬಿ ಕೂಡ ತುಮಕೂರು ಜಿಲ್ಲೆಯಲ್ಲಿ ಇರೋದು ಅಲ್ಲಿನ ಜನತೆ ಹೋರಾಟ ಮಾಡುವುದು ಬಿಡುವುದು ಜನತೆಯ ಯೋಚನೆ ಮಾಡಲಿ ನನ್ನ ಅಭ್ಯಂತರವೇನಿಲ್ಲ ಅಂತಾ ಇದೇ ವೇಳೆ ಅವರು ಹೇಳಿದರು.
ಇದೇ ವೇಳೆ ಜೆಡಿಎಸ್ ವಕ್ತಾರ ವೆಂಕಟಾಪುರ ಯೋಗೀಶ್, ತ್ಯಾಗರಾಜು, ಮುನಿಯೂರು ರಂಗಸ್ವಾಮಿ ಉಪಸ್ಥಿತರಿದ್ದರು.
ವರದಿ: ಮಂಜುನಾಥ ಕೆ.ಎ. ತುರುವೇಕೆರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


