ಸರಗೂರು: ತಾಲೂಕಿನ ವಿವಿಧ ಗ್ರಾಮಗಳಲ್ಲಿ ರೈತರು ಸುಮಾರು ವರ್ಷಗಳ ಹಿಂದಿನಿಂದ ಸಾಗುವಳಿ ಮಾಡಿಕೊಂಡು ಬರುತ್ತಿರುವ ರೈತರಿಗೆ ಕಿಮ್ಮತ್ತು ಕೊಟ್ಟಿರುವ ಹಾಗೂ ಸಾಗುವಳಿ ಚೀಟಿ ನೀಡಬೇಕೆಂದು ಒತ್ತಾಯಿಸಿ ಸರಗೂರು ಅಭಿವೃದ್ಧಿ ಹೋರಾಟ ಸಮಿತಿ ಹಾಗೂ ಭೂ ಹಕ್ಕುದಾರರ ವೇದಿಕೆ ಮತ್ತು ಪ್ರಗತಿಪರ ಸಂಘಟನೆಗಳದೊಂದಿಗೆ ಗುರುವಾರದಂದು ಜಿಲ್ಲಾಧಿಕಾರಿಗಳು ಬರಬೇಕು ಪಟ್ಟು ಹಿಡಿದು ಪ್ರತಿಭಟನೆ ನಡೆಸಿ, ನಂತರ ತಹಶೀಲ್ದಾರ್ ಮೋಹನಕುಮಾರಿರವರಿಗೆ ಮನವಿ ಸಲ್ಲಿಸಿದರು.
ನಂತರ ಸಭೆ ಕುರಿತು ಮಾತನಾಡಿದ ಸರಗೂರು ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಸಂಚಾಲಕ ಸರಗೂರು ಕೃಷ್ಣ ರವರು ಕುಂದೂರು, ಲಂಕೆ, ಹುನಗಹಳ್ಳಿ, ಹಾದನೂರು, ಪುರದಕಟ್ಟೆ, ಬರಗಿ, ಮೊಳೆಯೂರು ಇನ್ನೂ ಗ್ರಾಮಗಳಲ್ಲಿ ಸಾವಿರಾರು ರೈತರಿಗೆ ಭೂಮಿಯನ್ನು ಉಳುಮೆ ಮಾಡಿಕೊಂಡು ಬರುತ್ತಿದ್ದಾರೆ. ಅನುಭೋಗದಲ್ಲಿ ಇದ್ದರೂ ಸಾಗುವಳಿ ಪತ್ರ ನೀಡಲು ನಿರಾಕರಿಸುತ್ತಿದ್ದಾರೆ ಎಂದು ತಾಲೂಕು ಆಡಳಿತ ವಿರುದ್ಧ ವಿವಿಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ನೂರಾರು ವರ್ಷಗಳಿಂದ ರೈತರು ಭೂಮಿ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಸಾಗುವಳಿ ಕ್ರಮಬದ್ಧಗೊಳಿಸಬೇಕೆಂದು ಈ ಹಿಂದೆ ಹಲವು ಬಾರಿ ಶಾಸಕರು ಹಾಗೂ ತಹಶೀಲ್ದಾರ್ ಮನವಿ ಮಾಡಿಕೊಂಡರೂ ಪುರಸ್ಕರಿಸಿಲ್ಲ ಎಂದು ಪ್ರತಿಭಟನಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸರಕಾರದ 2006 ರ ಅರಣ್ಯ ಹಕ್ಕು ಕಾಯಿದೆ ಅನ್ವಯ ಗ್ರಾಮ ಅರಣ್ಯ ಸಮಿತಿ ರಚಿಸಿ, ಸಾಗುವಳಿ ಮಾಡುತ್ತಿರುವ ರೈತರಿಗೆ ಅರಣ್ಯ ಭೂಮಿ ಸಾಗುವಳಿ ಜಮೀನು ನೀಡಲು ಕ್ಲೇಮು ಸಲ್ಲಿಸಬೇಕೆಂಬ ಕಾನೂನುಯಿದೆ. ಆದರೂ ಸಂಬಂಧಪಟ್ಟ ಅಕಾರಿಗಳು ಜಾರಿಗೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ರೈತ ಸಂಘದ ಅಧ್ಯಕ್ಷ ಮಹದೇವನಾಯಕ ಮಾತನಾಡಿ ಬಗರ್ ಹುಕುಂ ಭೂಮಿಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರ ನೀಡುವ ಭರವಸೆ ನೀಡಿದ್ದಾರೆ. ಆದ್ದರಿಂದ ತಾಲೂಕಿನ ವ್ಯಾಪ್ತಿಯಲ್ಲಿ ಸಾಗುವಳಿ ಮಾಡುತ್ತಿರುವ ಜಮೀನುಗಳಿಗೆ ಹಕ್ಕು ಪತ್ರ ನೀಡಬೇಕೆಂದು ಒತ್ತಾಯಿಸಿದರು.
ಮನೆ–ಕೊಟ್ಟಿಗೆ ಕಟ್ಟಿಕೊಂಡು, ಸಾಗುವಳಿ ಮಾಡಿಕೊಂಡು ಬರುತ್ತಿರುವ ಜಮೀನಿನ ಹಕ್ಕುಪತ್ರಕ್ಕಾಗಿ ನಮೂನೆ 53ರಲ್ಲಿ 1999ರಲ್ಲೇ ಅರ್ಜಿ ಸಲ್ಲಿಸಿದ್ದರೂ ಶಾಸಕರ ಅಧ್ಯಕ್ಷ ತೆಯ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಇದುವರೆಗೂ ಪರಿಶೀಲಿಸಿಲ್ಲ. ಅಧಿಕೃತ ಹಕ್ಕುಪತ್ರವಿಲ್ಲದೇ, ಸ್ವಾಧೀನತೆಯಲ್ಲಿರುವ ಜಮೀನನ್ನು ಅಭಿವೃದ್ಧಿ ಮಾಡಲಾಗುತ್ತಿಲ್ಲ. ಬ್ಯಾಂಕ್ ಸಾಲಕೊಡುತ್ತಿಲ್ಲ, ಸರ್ಕಾರದ ಸೌಲತ್ತುಗಳನ್ನು ಪಡೆಯಲಾಗುತ್ತಿಲ್ಲ ಎಂದು ಈ ಸಂದರ್ಭದಲ್ಲಿ ಶಾಸಕರ ಗಮನಕ್ಕೆ ತರಬೇಕು ಎಂದು ತಹಶೀಲ್ದಾರ್ ರವರಿಗೆ ತಿಳಿಸಿದರು.
ದಸಂಸ ಮುಖಂಡ ಹಾಗೂ ಅಂಬೇಡ್ಕರ್ ಭವನ ಟ್ರಸ್ಟ್ ಅಧ್ಯಕ್ಷ ಎಸ್.ಡಿ.ಸಣ್ಣಸ್ವಾಮಿ ಮಾತನಾಡಿ, ಹತ್ತಾರು ವರ್ಷದಿಂದ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಹಕ್ಕು ಪತ್ರ ನೀಡಬೇಕಿದೆ. ಹಕ್ಕು ಪತ್ರ ನೀಡಲು ರೈತರ ಪರ ಕಾನೂನುಗಳಿದ್ದರೂ ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಅರಣ್ಯ ಪ್ರದೇಶದಲ್ಲಿ ದಶಕಗಳಿಂದ ಸಾಗುವಳಿ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದೆ. ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ದೌರ್ಜನ್ಯ ನಡೆಸುತ್ತಿರುವುದರಿಂದ; ರೈತರು ಬೀದಿಗೆ ಬೀಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿ ಎಲ್ಲಾ ರೈತರು ಹಾಗೂ ಮುಖಂಡರು ಸರಪಳಿ ನಿರ್ಮಿಸಿ, ಅರ್ಧ ಗಂಟೆ ಕಾಲ ರಸ್ತೆ ತಡೆ ನಡೆಸಿ. ಅದೇ ಮಾರ್ಗವಾಗಿ ಮೆರವಣಿಗೆ ಮೂಲಕ ವಿವಿಧ ಘೋಷಣೆ ಕೂಗುತ್ತಾ ತಹಶೀಲ್ದಾರ್ ಕಚೇರಿವರಗೂ ಮೆರವಣಿಗೆ ನಡೆಸಿದರು.
ತಹಶೀಲ್ದಾರ್ ಮೋಹನಕುಮಾರಿ ಮನವಿ ಸ್ವೀಕರಿಸಿ ಮಾತನಾಡಿ, ನಿಮ್ಮ ಮನವಿಯನ್ನು ನಮ್ಮ ಮೇಲಾಧಿಕಾರಿಗಳಿಗೆ ರವಾನಿಸಲಾಗುವುದು. ಈಗಾಗಲೇ ಮೂರು ದಿನಗಳ ಹಿಂದೆ ಶಾಸಕರ ಅಧ್ಯಕ್ಷತೆಯಲ್ಲಿ ಅಕ್ರಮ ಸಕ್ರಮ ಸಮಿತಿ ಸಭೆ ನಡೆಸಿ ಅರಣ್ಯ ಇಲಾಖೆಯಿಂದ ಎನ್ ಓಸಿ ಬಂದಿರುವರಿಗೆ ಸಾಗುವಳಿ ಪತ್ರ ನೀಡಿ ಎಂದು ಸೂಚಿಸಿದ್ದಾರೆ. ಅದರಂತೆ ಅರಣ್ಯ ಇಲಾಖೆಯ ಎನ್ ಓ ಸಿ ಗಳು ಬರಬೇಕಿದೆ. ನಮ್ಮ ಇಲಾಖೆ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ನಡೆಸುತ್ತಿದ್ದಾರೆ. ತಾಲ್ಲೂಕಿನ 9 ಗ್ರಾಮ ಪಂಚಾಯಿತಿಗಳು ಇವೆ ಮುಂದಿನ ತಿಂಗಳಲ್ಲಿ ಒಂದು ಒಂದು ಪಂಚಾಯಿತಿಯಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳನ್ನು ಕರಿಸಿ ಸಭೆ ಮಾಡುತ್ತೇವೆ ಎಂದು ತಿಳಿಸಿದರು. ಅಲ್ಲಿನ ಸಭೆಯಲ್ಲಿ ಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಾಮಗಳು ರೈತರು ಬಂದು ನಿಮ್ಮ ಅಳಲು ನೀಡಬಹುದು ಎಂದು ಮನವರಿಕೆ ಮಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಭೂ ಹಕ್ಕುದಾರರ ವೇದಿಕೆಯ ಅಧ್ಯಕ್ಷ, ಬಸವರಾಜು, ಪದಾಧಿಕಾರಿಗಳಾದ ಉಮೇಶ್, ಗೋಪಾಲರಾಜು, ಶಿವರಾಜು ಕೆ.ಎಂ., ರತ್ನರಾಜು, ಮಹಾದೇವನಾಯಕ, ಶೈಲೇಶ, ಶಿವಲಿಂಗಯ್ಯ, ಹಳೆಗ್ಗುಡಿಲು ನವೀನ್, ಸುನಿಲ್, ಸತೀಶ್, ಕೆಂಡ ನಾಯಕ, ಕೆಂಪರಾಜು,ದಸಂಸ ಮುಖಂಡರಾದ ಹೆಗ್ಗನೂರು ನಿಂಗರಾಜು, ರೈತ ಪ್ರತಾಪ್, ದಸಂಸ (ಅಂಬೇಡ್ಕರ್ ವಾದ) ತಾಲೂಕು ಸಂಚಾಲಕ ಗೋವಿಂದರಾಜು, ದೇವೇಂದ್ರ, ರವಿ ದಾವೂದ್, ಜಿಲ್ಲಾ ಸಂಯೋಜಕ ಹುನಗಹಳ್ಳಿ ಗೋವಿಂದ, ಅಣ್ಣಯ್ಯ ಸ್ವಾಮಿ, ಮಹೇದೇವಸ್ವಾಮಿ, ಸೋಮಣ್ಣ, ಬೆಟ್ಟ ನಾಯಕ, ವಾಲ್ಮೀಕಿ ಸಿದ್ದರಾಜು, ನಾಗರಾಜು, ಮನುಗನಹಳ್ಳಿ ಹುನಗನಹಳ್ಳಿ, ಲಂಕೆ, ಮುಳ್ಳೂರು, ದಡದಹಳ್ಳಿ, ಹಾದನೂರು, ಕೆ.ಬೆಳೆತ್ತೂರು. ಕೂಲ್ಯ, ಬಸಾಪುರ, ನೆಮ್ಮನಹಳ್ಳಿ, ಹಳೆ ಹೆಗ್ಗುಡಿಲು, ಹೂವಿನಕೊಳ, ಹಲಸೂರು, ಗ್ರಾಮಗಳಿಂದ ಸುಮಾರು 90 ಕ್ಕೂ ಹೆಚ್ಚು ಅರ್ಜಿದಾರರು ಭಾಗವಹಿಸಿದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


