ಸ್ನೇಹಾಲಯಂ ಕ್ರಿಯೇಷನ್ಸ್ ಬ್ಯಾನರ್ ನ ಅಡಿಯಲ್ಲಿ ನಿರ್ಮಾಣವಾಗುತ್ತಿರುವ. ಶಿಲ್ಪಾ ಶ್ರೀನಿವಾಸ್ ಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ಮುಗಿದಿದೆ.
ಬಂಗಾರಪೇಟೆ ತಾಲ್ಲೂಕಿನ ಶ್ರೀ ಶಿವಶನೈಶ್ಚರ ದೇವಾಲಯದಲ್ಲಿ ಫ್ಯಾಮಿಲಿ ಸ್ಟಾರ್ ಅಭಿಜಿತ್ ರವರು “ದೇವರು ಸೃಷ್ಠಿಸೋ ಸಿನಿಮಾದಲ್ಲಿ ನಾವೆಲ್ಲಾ ಪಾತ್ರಧಾರಿಗಳು” ಎಂಬ ಹಾಡಿಗೆ ಹೆಜ್ಜೆ ಹಾಕುವುದರ ಮೂಲಕ ಚಿತ್ರೀಕರಣ ಮುಕ್ತಾಯವಾಯಿತು. ಹಾರರ್ ಸಸ್ಪೆನ್ಸ್ ಥ್ರಿಲ್ಲರ್ ಕಥಾವಸ್ತು ವಿರುವ ಶಿಲ್ಪಾ ಶ್ರೀನಿವಾಸ್ ಚಿತ್ರದಲ್ಲಿ ಅಭಿಜಿತ್, ಶಿಲ್ಪಾ ಶ್ರೀನಿವಾಸ್, ಶೋಭರಾಜ್, ನಾಗೇಂದ್ರ ಅರಸ್, ಕಿಶೋರ್ ಕಾಸರಗೋಡು, ಸ್ವಾತಿ ಲಿಂಗರಾಜ್, ಪ್ರಿಯ, ಪಂಚಾಕ್ಷರಯ್ಯ, ಮರಿಸ್ವಾಮಿ, ಅಮೃತ ಕಾಳೆ,ಶಂಖನಾದ ಆಂಜಿನಪ್ಪ, ಮಾಸ್ಟರ್ ವೀರ ಧನುಷ್, ಅನ್ನಪೂರ್ಣ, ನಂದಿನಿ ಕಮ್ಮಯ್ಯ, ಧನ್ಯ ಭೂಮಿಕಾ ಶ್ರೀ.ಬೇಬಿ ಶಾರಿಕಾ ಕಾರ್ತೀಕ್, ಲಕ್ಷಿತ ಮನೋ ಮೊದಲಾದವರು ನಟಿಸಿದ್ದಾರೆ.
ಶಿಲ್ಪಾ ಶ್ರೀನಿವಾಸ್ ಚಿತ್ರಕ್ಕೆ ರಾಜೀವ್ ಕೃಷ್ಣ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಸಾಹಸ ಮತ್ತು ನೃತ್ಯ ನಿರ್ದೇಶನದ ಹೊರೆ ಹೊತ್ತಿರುವುದು ವಿಶೇಷ. ಛಾಯಾಗ್ರಹಣ ಪ್ರಮೋದ್, ಸಂಕಲನ ಡಿ ಮಲ್ಲಿ, ಸಂಗೀತ ಅನಿರುದ್ಧ ಶಾಸ್ತ್ರಿ, ಸಾಹಿತ್ಯ ಪ್ರತಾಪ್ ಭಟ್, ಸಹ ನಿರ್ದೇಶನ ಪ್ರವೀಣ್ ಭದ್ರಾವತಿ, ಮಲ್ಲಿ ಕೆ.ವಡ್ಡರಹಟ್ಟಿ, ಎಂ.ಜಿ.ಕಲ್ಲೇಶ್, ಡಾ.ಪ್ರಭುಗಂಜಿಹಾಳ, ಡಾ.ವೀರೇಶಹಂಡಿಗಿವಿ, ಎಂ.ಎಸ್.ಗೋಪಿ, ಪತ್ರಿಕಾ ಸಂಪರ್ಕ ಮಾಡಿದ್ದಾರೆ. ಶಿಲ್ಪಾ ಶ್ರೀನಿವಾಸ್ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಮೇ ತಿಂಗಳ ಮೊದಲ ವಾರದಲ್ಲಿ ಶಿಲ್ಪಾ ಶ್ರೀನಿವಾಸ್ ಸಿನಿಮಾ ತೆರೆಗೆ ತರಲು ಚಿತ್ರತಂಡ ಸಿದ್ದತೆ ನಡೆಸುತ್ತಿದ್ದಾರೆ.
— ವಿ.ಎಂ.ಎಸ್.ಗೋಪಿ, ಬೆಂಗಳೂರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


