nammatumakuru

    Subscribe to Updates

    Get the latest creative news from FooBar about art, design and business.

    What's Hot

    ಜನಗಣತಿ ವೇಳೆ ಬಯಲಾದ ವಲಸೆ ಚಿತ್ರಣ: ತುಮಕೂರಿನಲ್ಲಿ 1,514 ಮನೆಗಳಿಗೆ ಬೀಗ!

    May 18, 2026

    ಪಾರ್ಟ್‌ಟೈಮ್‌ ಕೆಲಸದ ಆಮಿಷ: ತುಮಕೂರಿನ ಮಹಿಳಾ ವೈದ್ಯೆಗೆ ₹4 ಲಕ್ಷ ವಂಚನೆ

    May 18, 2026

    ಸಿರಾ: ಬುಕ್ಕಾಪಟ್ಟಣ ವೃತ್ತದಲ್ಲಿ ಪೂರ್ಣಗೊಂಡು ಐದಾರು ತಿಂಗಳು ಕಳೆದರೂ ಉದ್ಘಾಟನೆಗೊಳ್ಳದ ಶೌಚಾಲಯ!

    May 18, 2026
    Facebook Twitter Instagram
    ಟ್ರೆಂಡಿಂಗ್
    • ಜನಗಣತಿ ವೇಳೆ ಬಯಲಾದ ವಲಸೆ ಚಿತ್ರಣ: ತುಮಕೂರಿನಲ್ಲಿ 1,514 ಮನೆಗಳಿಗೆ ಬೀಗ!
    • ಪಾರ್ಟ್‌ಟೈಮ್‌ ಕೆಲಸದ ಆಮಿಷ: ತುಮಕೂರಿನ ಮಹಿಳಾ ವೈದ್ಯೆಗೆ ₹4 ಲಕ್ಷ ವಂಚನೆ
    • ಸಿರಾ: ಬುಕ್ಕಾಪಟ್ಟಣ ವೃತ್ತದಲ್ಲಿ ಪೂರ್ಣಗೊಂಡು ಐದಾರು ತಿಂಗಳು ಕಳೆದರೂ ಉದ್ಘಾಟನೆಗೊಳ್ಳದ ಶೌಚಾಲಯ!
    • ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಮಾಯಕ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ: ರಸ್ತೆ ದುರಾವಸ್ಥೆ ವಿರುದ್ಧ ಪ್ರತಿಭಟನೆ
    • ಹುಳಿಯಾರು: ಮೇ 20 ರಂದು ವಿಶ್ವ ತಾಯಂದಿರ ದಿನಾಚರಣೆ
    • ಮಧುಗಿರಿ: ಚಾಕು ತೋರಿಸಿ ಕೇಬಲ್, ಪೈಪ್ ಕಳವು
    • ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಂದ ಪಾಪಿ ತಂದೆ: ಕೊಲೆಯ ನಂತರ ಮಗಳು ನಾಪತ್ತೆ ಎಂದು ಹೈಡ್ರಾಮಾ
    • ಸಾಧನ ಸಮಾವೇಶಕ್ಕೆ ಸರ್ಕಾರಿ ನೌಕರರ ಬಳಕೆ: ಹೈಕೋರ್ಟ್ ಮೆಟ್ಟಿಲೇರಲು ಮುಂದಾದ ಬಿಜೆಪಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಜನಗಣತಿ ವೇಳೆ ಬಯಲಾದ ವಲಸೆ ಚಿತ್ರಣ: ತುಮಕೂರಿನಲ್ಲಿ 1,514 ಮನೆಗಳಿಗೆ ಬೀಗ!
    ತುಮಕೂರು May 18, 2026

    ಜನಗಣತಿ ವೇಳೆ ಬಯಲಾದ ವಲಸೆ ಚಿತ್ರಣ: ತುಮಕೂರಿನಲ್ಲಿ 1,514 ಮನೆಗಳಿಗೆ ಬೀಗ!

    By adminMay 18, 2026No Comments2 Mins Read
    janaganati
    ಸಾಂದರ್ಭಿಕ ಚಿತ್ರ

    ತುಮಕೂರು: ಜಿಲ್ಲೆಯಲ್ಲಿ ಇತ್ತೀಚೆಗೆ ಪೂರ್ಣಗೊಂಡ ಮನೆ ಗಣತಿ ಕಾರ್ಯದ ವೇಳೆ ಭಾರಿ ಪ್ರಮಾಣದಲ್ಲಿ ಜನರ ವಲಸೆ ಹೋಗಿರುವುದು ಬೆಳಕಿಗೆ ಬಂದಿದೆ. ಜನಗಣತಿಯ ಭಾಗವಾಗಿ ನಡೆದ ಈ ಪ್ರಕ್ರಿಯೆಯಲ್ಲಿ ಜಿಲ್ಲೆಯಾದ್ಯಂತ ಒಟ್ಟು 1,514 ಮನೆಗಳಿಗೆ ಬೀಗ ಹಾಕಿರುವುದು ಕಂಡುಬಂದಿದೆ.

    ಏಪ್ರಿಲ್ 16ರಿಂದ ಮೇ 15ರ ವರೆಗೆ ಜಿಲ್ಲೆಯಲ್ಲಿ ಮನೆ ಗಣತಿ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆಯಲ್ಲಿ ಒಟ್ಟು 8,97,038 ಮನೆಗಳ ಗಣತಿ ಮಾಡುವ ಗುರಿಯನ್ನು ಹೊಂದಲಾಗಿತ್ತು. ಆದರೆ, ಗಣತಿ ಸಮಯದಲ್ಲಿ ಅನೇಕ ಕುಟುಂಬಗಳು ಮನೆಗೆ ಬೀಗ ಹಾಕಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.


    Provided by
    Provided by

    ಜಿಲ್ಲೆಯ ಪಾವಗಡ, ಶಿರಾದ ಗಡಿ ಭಾಗಗಳು, ಚಿಕ್ಕನಾಯಕನಹಳ್ಳಿ ಹಾಗೂ ತುಮಕೂರು ನಗರ ಪ್ರದೇಶಗಳಲ್ಲಿ ಅತಿ ಹೆಚ್ಚು ಮನೆಗಳಿಗೆ ಬೀಗ ಹಾಕಲಾಗಿದೆ. ವಿಶೇಷವಾಗಿ ಪಾವಗಡ ಮತ್ತು ಶಿರಾ ಭಾಗದ ಜನರು ಉದ್ಯೋಗ ಹಾಗೂ ಜೀವನೋಪಾಯ ಅರಸಿ ನಗರ ಪ್ರದೇಶಗಳಿಗೆ ವಲಸೆ ಹೋಗಿರುವುದರಿಂದ ಇಲ್ಲಿನ ಮನೆಗಳು ಖಾಲಿ ಬಿದ್ದಿವೆ ಎಂದು ವರದಿಯಾಗಿದೆ.

    ಜಿಲ್ಲೆಯಲ್ಲಿ ಒಟ್ಟು 5,253 ಗಣತಿ ಬ್ಲಾಕ್‌ಗಳನ್ನು (ಹೌಸ್‌ ಲಿಸ್ಟಿಂಗ್‌ ಬ್ಲಾಕ್‌) ಗುರುತಿಸಲಾಗಿದ್ದು, ಪ್ರತಿ ಬ್ಲಾಕ್‌ನಲ್ಲಿ 150 ರಿಂದ 200 ಮನೆಗಳನ್ನು ಸೇರಿಸಲಾಗಿತ್ತು. ಈ ಬೃಹತ್ ಕಾರ್ಯಕ್ಕಾಗಿ 45 ಮೇಲ್ವಿಚಾರಕರು ಹಾಗೂ 4,415 ಗಣತಿದಾರರನ್ನು ನಿಯೋಜಿಸಲಾಗಿತ್ತು.

    ಆರಂಭದಲ್ಲಿ ನಗರ ಭಾಗದಲ್ಲಿ ಗಣತಿ ಕಾರ್ಯ ಮಂದಗತಿಯಲ್ಲಿ ಸಾಗಿದರೂ, ನಂತರದ ದಿನಗಳಲ್ಲಿ ವೇಗ ಪಡೆದುಕೊಂಡಿತು. ಗ್ರಾಮೀಣ ಭಾಗಗಳಲ್ಲಿ ಮೊದಲಿನಿಂದಲೂ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು.

    ಮಧುಗಿರಿ ಮತ್ತು ಪಾವಗಡ ನಗರ ಪ್ರದೇಶಗಳಲ್ಲಿ ಮೇ 8ರ ವರೆಗೂ ಗಣತಿ ಕಾರ್ಯ ಅತ್ಯಂತ ನೀರಸವಾಗಿತ್ತು. ಆದರೆ, ಕೊನೆಯ ಒಂದು ವಾರದಲ್ಲಿ ಬಿರುಸಿನ ಕೆಲಸ ನಡೆಸಿ ಸುಮಾರು ಅರ್ಧದಷ್ಟು ಮನೆಗಳ ಗಣತಿಯನ್ನು ಪೂರ್ಣಗೊಳಿಸಲಾಯಿತು.

    ಗಣತಿ ಕಾರ್ಯದ ಆರಂಭದಲ್ಲಿ ಗಣತಿದಾರರು ತಾಂತ್ರಿಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ‘ಹೌಸ್‌ ಲಿಸ್ಟಿಂಗ್‌ ಆಪರೇಟಿಂಗ್‌ ಆ್ಯಪ್‌’ (HLO) ಇನ್‌ಸ್ಟಾಲ್ ಆಗದ ಕಾರಣ ಗಣತಿದಾರರು ಪರದಾಡಿದರು. ವಿಶೇಷವಾಗಿ ಆಂಡ್ರಾಯ್ಡ್ 10ಕ್ಕಿಂತ ಕಡಿಮೆ ಆವೃತ್ತಿಯ (ವರ್ಷನ್) ಮೊಬೈಲ್ ಹೊಂದಿದ್ದ ಸಿಬ್ಬಂದಿಗೆ ಆ್ಯಪ್ ಬೆಂಬಲಿಸದೆ ತೊಂದರೆಯಾಯಿತು. ಆದಾಗ್ಯೂ, ನಂತರದ ದಿನಗಳಲ್ಲಿ ಸಿಬ್ಬಂದಿ ಆ್ಯಪ್‌ಗೆ ಒಗ್ಗಿಕೊಂಡು ನಿಗದಿತ ಅವಧಿಯೊಳಗೆ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ.

    ಮನೆ ಗಣತಿ ಪ್ರಕ್ರಿಯೆ ಯಶಸ್ವಿಯಾಗಿ ಮುಗಿದಿದ್ದರೂ, ಗಣತಿಯ ಮೇಲ್ವಿಚಾರಕರಿಗೆ (Supervisors) ಇದುವರೆಗೂ ಇಲಾಖೆಯಿಂದ ಅಧಿಕೃತ ಗುರುತಿನ ಚೀಟಿಗಳನ್ನು ವಿತರಿಸಲಾಗಿಲ್ಲ. ಗಣತಿದಾರರಿಗೆ ಗುರುತಿನ ಚೀಟಿ ಸಿಕ್ಕಿದ್ದರೂ, ಮೇಲ್ವಿಚಾರಕರು ಮಾತ್ರ ವಂಚಿತರಾಗಿದ್ದಾರೆ. ಗಣತಿ ಆರಂಭವಾದ ವಾರದ ನಂತರ ಅವರಿಗೆ ಅಗತ್ಯ ಪರಿಕರಗಳನ್ನು ನೀಡಲಾಗಿತ್ತು. ಮುಂದಿನ ದಿನಗಳಲ್ಲಿಯೂ ಇವರನ್ನೇ ಪ್ರಮುಖ ಗಣತಿ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತದೆಯಾದ್ದರಿಂದ, ಅದಕ್ಕೂ ಮುನ್ನವೇ ಇಲಾಖೆ ಗುರುತಿನ ಚೀಟಿ ಹಾಗೂ ಅಗತ್ಯ ಪರಿಕರಗಳನ್ನು ಒದಗಿಸಬೇಕಿದೆ ಎಂದು ಸಿಬ್ಬಂದಿ ಒತ್ತಾಯಿಸಿದ್ದಾರೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಪಾರ್ಟ್‌ಟೈಮ್‌ ಕೆಲಸದ ಆಮಿಷ: ತುಮಕೂರಿನ ಮಹಿಳಾ ವೈದ್ಯೆಗೆ ₹4 ಲಕ್ಷ ವಂಚನೆ

    May 18, 2026

    ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಮಾಯಕ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ: ರಸ್ತೆ ದುರಾವಸ್ಥೆ ವಿರುದ್ಧ ಪ್ರತಿಭಟನೆ

    May 18, 2026

    ತುಮಕೂರು: ಕಾರ್ಮಿಕನ ಮೇಲೆ ಲಾರಿ ಹರಿದು ಸಾವು

    May 16, 2026

    Leave A Reply Cancel Reply

    Our Picks

    ಭೀಕರ ರಸ್ತೆ ಅಪಘಾತ: ತೆಲುಗು ನಟ ಭರತ್ ಕಾಂತ್ ಸಾವು

    May 13, 2026

    ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ: ತಮಿಳುನಾಡಿನಲ್ಲಿ ನಟ ವಿಜಯ್ ಅಬ್ಬರ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುನ್ನಡೆ

    May 4, 2026

    ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕೋರ್ಟ್ ಕದ ತಟ್ಟಿದ ನಟ ದರ್ಶನ್: ಮೇ 4ಕ್ಕೆ ವಿಚಾರಣೆ

    April 29, 2026

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಜನಗಣತಿ ವೇಳೆ ಬಯಲಾದ ವಲಸೆ ಚಿತ್ರಣ: ತುಮಕೂರಿನಲ್ಲಿ 1,514 ಮನೆಗಳಿಗೆ ಬೀಗ!

    May 18, 2026

    ತುಮಕೂರು: ಜಿಲ್ಲೆಯಲ್ಲಿ ಇತ್ತೀಚೆಗೆ ಪೂರ್ಣಗೊಂಡ ಮನೆ ಗಣತಿ ಕಾರ್ಯದ ವೇಳೆ ಭಾರಿ ಪ್ರಮಾಣದಲ್ಲಿ ಜನರ ವಲಸೆ ಹೋಗಿರುವುದು ಬೆಳಕಿಗೆ ಬಂದಿದೆ.…

    ಪಾರ್ಟ್‌ಟೈಮ್‌ ಕೆಲಸದ ಆಮಿಷ: ತುಮಕೂರಿನ ಮಹಿಳಾ ವೈದ್ಯೆಗೆ ₹4 ಲಕ್ಷ ವಂಚನೆ

    May 18, 2026

    ಸಿರಾ: ಬುಕ್ಕಾಪಟ್ಟಣ ವೃತ್ತದಲ್ಲಿ ಪೂರ್ಣಗೊಂಡು ಐದಾರು ತಿಂಗಳು ಕಳೆದರೂ ಉದ್ಘಾಟನೆಗೊಳ್ಳದ ಶೌಚಾಲಯ!

    May 18, 2026

    ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಮಾಯಕ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ: ರಸ್ತೆ ದುರಾವಸ್ಥೆ ವಿರುದ್ಧ ಪ್ರತಿಭಟನೆ

    May 18, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.