ತುಮಕೂರು: ತಾಲ್ಲೂಕಿನ ಗೂಳೂರು ಹೋಬಳಿ, ಗೂಳೂರು ಗ್ರಾಮದ ಸ.ನಂ. 119/2ಆ ರಲ್ಲಿ 2–16 ಗುಂಟೆ, 119/2ಬಿ ರಲ್ಲಿ 3–03 ಗುಂಟೆ, 119/2ಬಿ1 ರಲ್ಲಿ 1–05 ಗುಂಟೆ ಹಾಗೂ 119/2ಬಿ1 ರಲ್ಲಿ 1–10 ಗುಂಟೆ ಒಟ್ಟು 7–34 ಗುಂಟೆ ಜಮೀನು ಆಶ್ರಯ ನಿವೇಶನಕ್ಕೆ ರಾಜ್ಯಪಾಲರ ಹೆಸರಿಗೆ ಪಹಣಿ ಇರುತ್ತದೆ. ಇದರಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಲು ಹೊರಟಿರುವವರನ್ನು ತೆರವುಗೊಳಿಸಿ ಮನೆ ಮತ್ತು ನಿವೇಶನ ಇಲ್ಲದವರಿಗೆ ಮಂಜೂರು ಮಾಡಿಕೊಡುವಂತೆ ದಲಿತ ಸೇನೆ ರಾಮ್ ವಿಲಾಸ್ ಸಂಘಟನೆ ವತಿಯಿಂದ ಮಾನ್ಯ ತುಮಕೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಮನವಿ ಪತ್ರ ಸಲ್ಲಿಸಿ ಗೂಳೂರು ಸಿದ್ದರಾಜು ಮಾತನಾಡಿ, ಮೇಲ್ಕಂಡ ಸರ್ವೇ ನಂಬರುಗಳಲ್ಲಿ ಕಳೆದ 30 ವರ್ಷಗಳಿಂದ ಹಿಂದೆ ಹಕ್ಕುಪತ್ರ ಪಡೆದಿದ್ದು, ಇಲ್ಲಿಯವರೆಗೆ ಪಂಚಾಯಿತಿಯಲ್ಲಿ ಯಾವುದೇ ತರಹದ ಪಹಣಿ ಮಾಡಿಸಿಕೊಂಡು ಮನೆ ಕಟ್ಟಿರುವುದಿಲ್ಲ ಮತ್ತು ವಾಸವೂ ಇರುವುದಿಲ್ಲ. ಈ ಹಕ್ಕು ಪತ್ರವನ್ನು ಪಡೆದಿರುವವರು ಮನೆ ಮತ್ತು ನಿವೇಶನ ಹೊಂದಿರುತ್ತಾರೆ. ಇವರುಗಳು ಆರ್ಥಿಕವಾಗಿ ಸಬಲರಾಗಿರುತ್ತಾರೆ.
ಆದುದರಿಂದ ಈ ಮೇಲ್ಕಂಡ ಸರ್ಕಾರದ ಜಮೀನಿನಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಲು ಹೊರಟಿರುತ್ತಾರೆ. 30 ವರ್ಷಗಳ ಹಿಂದೆ 3-4 ಹಕ್ಕುಪತ್ರಗಳನ್ನು ಪಡೆದಿರುತ್ತಾರೆ. ಅಕ್ರಮವಾಗಿ ಶೆಡ್ ನಿರ್ಮಿಸಲು ಹೊರಟಿರುವವರನ್ನು ತೆರವುಗೊಳಿಸಿ, ಗ್ರಾಮ ಸಭೆಯಲ್ಲಿ ಅರ್ಜಿ ಪಡೆದು, ಪರಿಶೀಲಿಸಿ ನೈಜ ಫಲಾನುಭವಿಗಳಿಗೆ ಅಂದರೆ ಮನೆ, ನಿವೇಶನ ಇಲ್ಲದ ಕಡುಬಡವರಿಗೆ, ಆರ್ಥಿಕವಾಗಿ ಹಿಂದುಳಿದಿರುವವರಿಗೆ ನಿವೇಶನ ಮಂಜೂರು ಮಾಡಿ, ಹಕ್ಕುಪತ್ರ ನೀಡಬೇಕೆಂದು ನಮ್ಮ ಮನವಿಯಲ್ಲಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದಲಿತ ಸೇನೆ ರಾಮ್ ವಿಲಾಸ್ ಸಂಘಟನೆಯ ಜಿಲ್ಲಾಧ್ಯಕ್ಷ ಗೂಳೂರು ಸಿದ್ದರಾಜು, ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅ.ಭಾ.ದ.ಕ್ರಿ.ಸ.ಜಿ. ಅಧ್ಯಕ್ಷ ಎನ್. ಕೆ ನಿಧಿ ಕುಮಾರ್, ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯ ಗೋವಿಂದರಾಜು ಕೆ., ದಲಿತ ಸೇನೆ ಕಾರ್ಯಕರ್ತರಾದ ಮುರಳಿ, ನಾಗರಾಜ್, ಗೌತಮ್, ರಾಜಣ್ಣ, ಅ.ಭಾ.ದ.ಕ್ರಿ.ಸ. ಜಿಲ್ಲಾ ಸಂಘಟನಾ ಕಾರ್ಯದರ್ಶಿ ತ್ಯಾಗರಾಜ್ ಕೆ, ಮುಂತಾದವರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


