ತುಮಕೂರು: ಕುಲ್ಲಕ ವಿಚಾರಕ್ಕೆ ಜಗಳ ನಡೆದ ಪರಿಣಾಮವಾಗಿ ಮಹಿಳೆಯೊಬ್ಬರು ಪ್ರಾಣ ತೆತ್ತಿರುವ ಘಟನೆ ನಗರದ ವೀರಸಾಗರದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಫರ್ಹಾನಾಖಾನಂ (45) ಎಂದು ಗುರುತಿಸಲಾಗಿದೆ.
ಜಾಫರ್ ಮತ್ತು ಫರ್ಹಾನಾ ಖಾನಂ ಕುಟುಂಬಗಳ ಮಧ್ಯೆ ಮಕ್ಕಳ ವಿಚಾರಕ್ಕಾಗಿ ಜಗಳ ನಡೆದಿದೆ. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡಿದ್ದ ಜಾಫರ್ ತನ್ನ ಸಂಬಂಧಿ ಬಾಬು ಖಾನ್ ಜೊತೆ ಸೇರಿಕೊಂಡು ವೀರಸಾಗರ ಮುಖ್ಯ ರಸ್ತೆಯಲ್ಲಿ ಮಗ ಹಯಾತ್ ಮೇಲೆ ಹಲ್ಲೆ ನಡೆಸುತ್ತಿದ್ದರು. ಇದನ್ನು ಕಂಡ ಫರ್ಹಾನಾ ಮತ್ತೊಬ್ಬ ಪುತ್ರನ ಜೊತೆ ಹೋಗಿ ಜಗಳ ಬಿಡಿಸಲು ಮುಂದಾದರು.
ಈ ವೇಳೆ ಜಾಫರ್ ಕಬ್ಬಿಣದ ರಾಡ್‌ನಿಂದ ಫರ್ಹಾನಾ ತಲೆಗೆ ಹೊಡೆದಿದ್ದರಿಂದ ಆಕೆ ಪ್ರಜ್ಞೆ ತಪ್ಪಿ ಬಿದ್ದರು. ಕೂಡಲೇ ಆಕೆಯನ್ನು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತಾದರೂ ಅಲ್ಲಿ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟರು.
ಆರೋಪಿಗಳು ತಲೆಮರೆಸಿಕೊಂಡಿದ್ದು, ಇವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಈ ಬಗ್ಗೆ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


