ತುಮಕೂರು: ಹಾಲೆನಹಳ್ಳಿ ಪಂಚಾಯಿತಿಯ ಮುಗಿಲು ಯುವಜನ ಸಂಘದ ವತಿಯಿಂದ ಹೊಸ ಬಡಾವಣೆಯಲ್ಲಿರುವ ಮಕ್ಕಳಿಗೆ ಮೊಬೈಲ್ ಬಳಕೆ, ಪರಿಣಾಮ ಕುರಿತು ಅರಿವು ಮೂಡಿಸುವ ಕಿರುಚಿತ್ರ ಪ್ರದರ್ಶನವನ್ನು ಆಯೋಜಿಸಲಾಗಿತ್ತು.
ಕಿರು ಚಿತ್ರವನ್ನು ವೀಕ್ಷಿಸಿದ ನಂತರ ಮಕ್ಕಳೊಂದಿಗೆ ಮೊಬೈಲ್ ಅನ್ನು ಸಕಾರಾತ್ಮಕವಾಗಿ ಬಳಸುವುದು ಹೇಗೆ ಹಾಗೂ ಗೇಮ್ ಗಳಿಗೆ ಹೆಚ್ಚು ಅಡಿಕ್ಟಾಗುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಆಗುವ ತೊಂದರೆಗಳ ಕುರಿತು ಚರ್ಚೆ ಮಾಡಲಾಯಿತು.
ಮೊಬೈಲ್ ಬಳಸುವಾಗ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್‌ಗಳನ್ನು ವಹಿಸಬೇಕಾದ ಎಚ್ಚರಿಕೆಗಳ ಕುರಿತು ಮಕ್ಕಳೊಂದಿಗೆ ಸಂವಾದ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುಗಿಲು ಯುವಜನ ಸಂಘದ ಶಹತಾಜ್, ಲಕ್ಷ್ಮಿ, ಲಿಖಿತ, ಅಂಕಿತ, ಅಮೀನಾ, ರಮ್ಯಾ, ವಿದ್ಯಾ, ಮಮತಾ ಹಾಗೂ ನವ್ಯದಿಶ ಸಂಸ್ಥೆಯ ಸಿಎಂಎಸ್ ಗೌಡ, ಅಶ್ವಿನಿ ಎಂ., ಮಕ್ಕಳು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


