ತುಮಕೂರು: ಪರಿಸರ ಸಂರಕ್ಷಣೆ ಮತ್ತು ವನ್ಯಜೀವಿಗಳ ಬದುಕುಳಿಯುವಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ, ವಿವಿಧ ಸಂಘ–ಸಂಸ್ಥೆಗಳ ಒಕ್ಕೂಟದ ವತಿಯಿಂದ ಮೇ 31, ಭಾನುವಾರದಂದು ಬೆಳಿಗ್ಗೆ 7:00 ಗಂಟೆಗೆ ನಾಮದ ಚಿಲುಮೆಯಲ್ಲಿ ಜಲಸೇವೆ ಮತ್ತು ಪ್ಲಾಸ್ಟಿಕ್ ಮುಕ್ತ ಸ್ವಚ್ಛತಾ ಆಂದೋಲನ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿದೆ.
ಈ ಕಾರ್ಯಕ್ರಮವು ಭಾರತ ಸೇವಾದಳ, ಐಕ್ಯ ಫೌಂಡೇಶನ್, ಯೂತ್ ಫಾರ್ ಸೇವಾ ತುಮಕೂರು ಶಾಖೆ ನವಿಲು ಫೌಂಡೇಶನ್, ಭಾವೈಕ್ಯ ಯುವಜನ ಸಂಘ, ಪ್ರೇರಣಾ ಡಿಸೇಬಲ್ಡ್ ವೆಲ್ಫೇರ್ ಟ್ರಸ್ಟ್(ರಿ), ಕಲಾ ಕಲ್ಪಂ(ರಿ) ಹಾಗೂ ಸಮಾನ ಮನಸ್ಕರ ಒಕ್ಕೂಟದ ಸಂಘಟನೆಗಳ ಸಹಯೋಗದಲ್ಲಿ ನಡೆಯಲಿದೆ.
ಎಲ್ಲಾ ಸಂಘ–ಸಂಸ್ಥೆಗಳು, ಒಕ್ಕೂಟಗಳು, ತಂಡಗಳು ಮತ್ತು ಜನಪ್ರತಿನಿಧಿಗಳ ಸಮಾನ ಮನಸ್ಸಿನ ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ಸಂಘಟಿಸಿ, ನೇತೃತ್ವ ವಹಿಸಲಾಗುತ್ತಿದೆ. ಅರಣ್ಯದ ಪ್ರಾಣಿ-ಪಕ್ಷಿಗಳಿಗೆ ನೀರು ಒದಗಿಸುವುದು ಮತ್ತು ನಮ್ಮ ನೈಸರ್ಗಿಕ ತಾಣಗಳನ್ನು ಪ್ಲಾಸ್ಟಿಕ್ ಮುಕ್ತವಾಗಿಸುವುದು ಈ ಆಂದೋಲನದ ಮುಖ್ಯ ಉದ್ದೇಶವಾಗಿದೆ.
ಪರಿಸರದ ಮೇಲೆ ಕಾಳಜಿ ಇರುವವರು, ಆಸಕ್ತಿಯುಳ್ಳವರು ಮತ್ತು ಸಮಯಾವಕಾಶ ಇರುವ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಪರಿಸರವನ್ನು ಉಳಿಸುವ ಈ ಪವಿತ್ರ ಕಾರ್ಯದಲ್ಲಿ ಕೈಜೋಡಿಸಬೇಕೆಂದು ಆಯೋಜಕರು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


