ತುಮಕೂರು: ವಿಶೇಷ ಚೇತನರ ಹಾಗೂ ಹಿರಿಯನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2026ನೇ ಸಾಲಿನ ವಿಶ್ವ ಹಿರಿಯನಾಗರಿಕರ ದಿನಾಚರಣೆ ಅಂಗವಾಗಿ ರಾಜ್ಯಾದ್ಯಂತ ಹಿರಿಯನಾಗರಿಕರ ಗುರುತಿನ ಚೀಟಿ ವಿಶೇಷ ಅಭಿಯಾನ ವನ್ನು ಹಮ್ಮಿಕೊಳ್ಳಲಾಗಿದೆ.
ಹಿರಿಯರು ಗುರುತಿನ ಚೀಟಿ ಹೊಂದುವುದು ಕೇವಲ ಗುರುತಿನ ದಾಖಲೆ ಮಾತ್ರವಲ್ಲದೇ, ಜೀವನ ಮಟ್ಟವನ್ನು ಸುಧಾರಿಸಲು ಪ್ರಮುಖ ಪಾತ್ರ ವಹಿಸುತ್ತದೆ. ಗುರುತಿನ ಚೀಟಿ ಪಡೆಯುವುದರಿಂದ ವಿಮಾನ ಪ್ರಯಾಣ, ರೈಲ್ವೆ ಪ್ರಯಾಣ, ಬಸ್ ಪಾಸ್ ಹಾಗೂ ಬಸ್ ಪ್ರಯಾಣದ ದರದಲ್ಲಿ ರಿಯಾಯಿತಿ (ಬಿ.ಎಂ.ಟಿ.ಸಿ ಮತ್ತು ಕೆಎಸ್ ಆರ್ ಟಿಸಿ), ಆದಾಯ ತೆರಿಗೆಯಲ್ಲಿ ವಿನಾಯಿತಿ ಮತ್ತು ಹಿರಿಯನಾಗರಿಕರ ಪೋಷಣಾ ಭತ್ಯೆಯನ್ನು ಪಡೆಯಬಹುದಾಗಿದೆ.
ಈಗಾಗಲೇ ಹಿರಿಯನಾಗರಿಕರ ಗುರುತಿನ ಚೀಟಿ ಹೊಂದಿರುವವರನ್ನು ಹೊರತುಪಡಿಸಿ ಜಿಲ್ಲೆಯ 60 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯನಾಗರಿಕರು ಆಧಾರ್ ಕಾರ್ಡ್‌ನಲ್ಲಿ ಕೆ.ವೈ.ಸಿ ಹೊಂದಿರುವ ಮೊಬೈಲ್‌ನೊಂದಿಗೆ, ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಅಳತೆಯ ಫೋಟೋ, ರಕ್ತದ ಗುಂಪಿನ ದಾಖಲೆಯನ್ನು ತಮ್ಮ ಸಮೀಪದ ಗ್ರಾಮ ಒನ್, ಸಿ.ಎಸ್.ಸಿ ಕೇಂದ್ರ, ಕರ್ನಾಟಕ ಒನ್‌ಗೆ ಭೇಟಿ ನೀಡಿ, ಹಿರಿಯನಾಗರಿಕರ ಗುರುತಿನ ಚೀಟಿ ಪಡೆಯಲು ಆನ್ ಲೈನ್ ಅರ್ಜಿ ಸಲ್ಲಿಸಿ, ಗುರುತಿನ ಚೀಟಿ ಪಡೆಯುವುದರ ಮೂಲಕ ವಿಶೇಷ ಅಭಿಯಾನವನ್ನು ಯಶಸ್ವಿಗೊಳಿಸಲು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯನಾಗರಿಕರ ಕಲ್ಯಾಣಾಧಿಕಾರಿ ಮನವಿ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


