ಕೊರಟಗೆರೆ: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕ್ರೀಡಾಂಗಣಗಳನ್ನು ನಿರ್ಮಿಸುವುದರಿಂದ ಗ್ರಾಮೀಣ ಭಾಗದಲ್ಲಿ ಹೆಚ್ವಿನ ಕ್ರೀಡಾಪಟುಗಳು ರೂಪುಗೊಳ್ಳಲು ಸಾಧ್ಯ. ಗ್ರಾಮೀಣ ಕ್ರೀಡೆಗಳು ಜೀವಂತವಾಗಿದ್ದಾಗ ಮಾತ್ರ ಯುವಕರ ಅನಾರೋಗ್ಯ ದೂರವಾಗುತ್ತದೆ. ಆದ್ದರಿಂದ ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ ಆಟದ ಮೈದಾನ ಕಲ್ಪಿಸುವುದು ಸರ್ಕಾರಗಳ ಪ್ರಮುಖ ಕರ್ತವ್ಯ ಎಂದು ಕೈಗಾರಿಕಾ ಉದ್ಯಮಿ ಹಾಗೂ ಸಮಾಜ ಸೇವಕರಾದ ಎಂ.ಎನ್.ಜೆ. ಮಂಜುನಾಥ್ ಆಗ್ರಹಿಸಿದರು.
ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿ, ಅರಸಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಗ್ರಹಾರ ಗ್ರಾಮದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ‘ದಸರಾ ಕ್ರಿಕೆಟ್ ಕಪ್’ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಯುವಜನತೆ ಕ್ರೀಡೆಗಳಲ್ಲಿ ತೊಡಗಿಕೊಳ್ಳುವುದರಿಂದ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಕ್ರೀಡೆಯು ಶಿಸ್ತು ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುವುದರ ಜೊತೆಗೆ ಪ್ರತಿಭಾವಂತ ಕ್ರೀಡಾಪಟುಗಳನ್ನು ಸೃಷ್ಟಿಸುತ್ತದೆ. ಯುವಕರಿಗೆ ಕ್ರೀಡಾ ಸೌಲಭ್ಯ ಹಾಗೂ ಮೈದಾನ ಒದಗಿಸುವುದು ಗ್ರಾಮೀಣ ಅಭಿವೃದ್ಧಿಯ ಜವಾಬ್ದಾರಿಯೂ ಹೌದು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮಕ್ಕೂ ಮುನ್ನ ಬೈರೇನಹಳ್ಳಿಯಿಂದ ಅಗ್ರಹಾರ ಗ್ರಾಮದವರೆಗೆ ನೂರಾರು ಯುವ ಕ್ರೀಡಾಪಟುಗಳು ಎಂ.ಎನ್.ಜೆ. ಮಂಜುನಾಥ್ ಅವರನ್ನು ಬೈಕ್ ರ್ಯಾಲಿ ನಡೆಸಿ ಅದ್ದೂರಿಯಾಗಿ ಸ್ವಾಗತಿಸಿದರು. ಬಳಿಕ ಮಂಜುನಾಥ್ ಅವರೇ ಸ್ವತಃ ಕ್ರಿಕೆಟ್ ಆಡುವ ಮೂಲಕ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಯುವಕರಿಗೆ ಪ್ರೋತ್ಸಾಹ ತುಂಬಿದರು.
ಶಿಕ್ಷಣ ಮತ್ತು ಕ್ರೀಡೆ ಗ್ರಾಮೀಣ ಯುವಕರ ಪ್ರಮುಖ ಆಸ್ತಿಯಾಗಿದೆ. ಹೊಳವನಹಳ್ಳಿ ಹೋಬಳಿಯ ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲೂ ಕ್ರಿಕೆಟ್ ಟೂರ್ನಿ ಆಯೋಜನೆ ಮಾಡಲಿದ್ದೇನೆ. ಕ್ರೀಡೆಯಿಂದಲೇ ನಾಯಕತ್ವದ ಗುಣ ಬೆಳೆಯುವುದರಿಂದ ಪ್ರತಿ ಹಳ್ಳಿಯಲ್ಲೂ ಯುವ ನಾಯಕತ್ವ ಬೆಳೆಸಬೇಕಿದೆ. ಗಡಿಭಾಗದ ಹಳ್ಳಿಗಳ ಸರ್ವಾಂಗೀಣ ಅಭಿವೃದ್ಧಿಗೆ ನನ್ನ ಸಂಪೂರ್ಣ ಸಹಕಾರ ಸದಾ ಇರಲಿದೆ.
— ಎಂ.ಎನ್.ಜೆ. ಮಂಜುನಾಥ್, ಕೈಗಾರಿಕಾ ಉದ್ಯಮಿ, ಕೊರಟಗೆರೆ.
ಈ ಸಂದರ್ಭದಲ್ಲಿ ಅರಸಾಪುರ ಗ್ರಾ.ಪಂ. ಮಾಜಿ ಅಧ್ಯಕ್ಷ ರಾಮಕೃಷ್ಣಯ್ಯ, ಬಿ.ಎಸ್. ರಾಜಣ್ಣ, ಮಂಜುನಾಥ್, ಮುಖಂಡರಾದ ನಯಾಜ್ ಅಹಮ್ಮದ್, ಆನಂದ್, ಮರುಡಪ್ಪ, ರಾಯವಾರ ರಾಮಕೃಷ್ಣ, ನಂದೀಶ್, ಶಿವಕುಮಾರ್, ಮದನ್, ಪುರುಷೋತ್ತಮ, ಜಯಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
