ಹೆಚ್.ಡಿ.ಕೋಟೆ: ಹೆಚ್.ಡಿ.ಕೋಟೆಯ ಪಟ್ಟಣದ ಸಿದ್ದಪಾಜಿ ರಸ್ತೆ ನಿವಾಸಿ, ರಾಜಮ್ಮ ಅವರು ಅಪಘಾತದಿಂದಾಗಿ ಅಕಾಲಿಕವಾಗಿ ನಿಧನರಾಗಿದ್ದು, ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿ, ಆದಿ ಕರ್ನಾಟಕ ಮಹಾಸಭಾ ಹಾಗೂ ಪ್ರಗತಿಪರ ಸಂಘಟನೆಗಳ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಹೆಚ್.ಡಿ.ಕೋಟೆ ಪಟ್ಟಣದ ಸಿದ್ಧಪಾಜಿ ರಸ್ತೆ ನಿವಾಸಿಯಾಗಿರುವ ರಾಜಮ್ಮ ಅವರು, ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಸ್ವಚ್ಛತಾ ಸೈನಿಕರಾಗಿ ಕೆಲಸ ಮಾಡುತ್ತಿದ್ದರು. ತಮ್ಮ ಕರ್ತವ್ಯದ ಜೊತೆಗೆ ಸಮಾಜ ಸೇವೆಗೂ ಮನಮಿಡಿದಿದ್ದರು. ಆದರೆ, ಕರ್ತವ್ಯ ಮುಗಿಸಿ ತಮ್ಮ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಇಲ್ಲಿನ 1ನೇ ಮುಖ್ಯ ರಸ್ತೆಯ ಶ್ರೀಮಾರಮ್ಮನ ಗುಡಿಯ ಮುಂದೆ ಹಂಸ್ ಮೇಲೆ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ್ದಾರೆ.
ಹೆಚ್.ಡಿ.ಕೋಟೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರಾಜಮ್ಮ ಅವರಿಗೆ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿತ್ತು. ಈ ಸಭೆಗೆ ಎಲ್ಲಾ ರಾಜಕೀಯ ಮುಖಂಡರು ಎಲ್ಲಾ ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಾಗೂ ದಿನಗೂಲಿ ನೌಕರರು ಹಾಜರಿದ್ದರು.
ಈ ಸಭೆಯಲ್ಲಿ ಮಹಾ ಸಭಾದ ಅಧ್ಯಕ್ಷರಾದ ಶಿವಣ್ಣ, ಮಾಜಿ ಅಧ್ಯಕ್ಷರಾದ ಮಲಾರ ಪುಟ್ಟಯ್ಯ, ಹೈರಿಗೆ ಮುದ್ದು ಮಲ್ಲಯ್ಯ, ಚಾ, ನಂಜುಂಡ ಮೂರ್ತಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು ವೆಂಕಟಸ್ವಾಮಿ, ದಿನಗೂಲಿ ನೌಕರ ಅಧ್ಯಕ್ಷರಾದ ಮಾಲಿಂಗಯ್ಯ, ಸಿ ಪಿ ಐ ಎಮ್ ಎಲ್ ಜಿಲ್ಲಾ ಕಾರ್ಯದರ್ಶಿಗಳು ಚೌಡಹಳ್ಳಿ ಜವರಯ್ಯ ಸಿ ಪಿ ಐ ಎಮ್ ಅಕ್ಬರ್ ಪಾಷ, ಮಾಜಿ ಪಟ್ಟಣ ಪಂಚಾಯ್ತಿಅಧ್ಯಕ್ಷರಾದಶಿವಣ್ಣಸರಗೂರು.ದಿನಗೂಲಿ ನೌಕರರು ಮತ್ತು ದಿನಗೂಲಿ ಅಡಿಗೆಯವರು ಭಾಗಿಯಾಗಿದ್ದರು.
ಇನ್ನೂ ರಾಜಮ್ಮ ಅವರ ನಿಧನಕ್ಕೆ ಸರ್ವಧರ್ಮ ಸಮಾಜ ಸೇವಾ ಟ್ರಸ್ಟ್ (ರಿ)ನ ಸಂಸ್ಥಾಪಕ ಅಧ್ಯಕ್ಷರಾದ ಕೃಷ್ಣರಾಜು ಕೆ.ಹಳೆಹೆಗ್ಗುಡಿಲು ಅವರು ಕೂಡ ಸಂತಾಪ ಸೂಚಿಸಿದ್ದು, ನಮ್ಮ ಸರ್ವಧರ್ಮ ಸಮಾಜ ಸೇವಾ ಟ್ರಸ್ಟ್ ಹಲವು ಕಾರ್ಯಕ್ರಮಗಳಿಗೆ ಒತ್ತಾಸೆಯಾಗಿ ನಿಂತು ಡಾ.ಅಂಬೇಡ್ಕರ್ ಭವನವನ್ನು ಯಾವಾಗ ಬೇಕು ಆವಾಗ ನಮ್ಮ ಕಾರ್ಯಕ್ರಮ ಮುಗಿಯುವ ವರೆಗೂ ಕಾದು ಸಜ್ಜುಗೊಳಿಸಿಕೊಡುತ್ತಿದ್ದ ಹಾಗೂ ನಮ್ಮೆಲ್ಲರೊಂದಿಗೆ ಅತ್ಯಂತ ಪ್ರೀತಿಪೂರ್ವಕವಾಗಿ ಆತ್ಮೀಯತೆಯಿಂದ ಇದ್ದ ತಾಯಿ ಹೃದಯಿ “ರಾಜಮ್ಮಕ್ಕ ಸಿದ್ದಪ್ಪಾಜಿ ರಸ್ತೆ” ರವರು ಅಪಘಾತದಿಂದ ನಿಧನರಾಗಿದ್ದಾರೆ ಎಂದು ಹೇಳಲು ವಿಷಾದಿಸುತ್ತೇನೆ. ಇವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಪ್ರಕೃತಿ ನೀಡಲಿ ಮತ್ತು ನಮ್ಮ ಟ್ರಸ್ಟ್ ಸದಾ ಇವರ ಕುಟುಂಬದೊಂದಿಗೆ ಇರುತ್ತದೆ ಎಂದು ಹೇಳಲು ಇಚ್ಛಿಸುತ್ತೇವೆ ಎಂದು ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB