ಇಲ್ಲೊಬ್ಬ ಯುವತಿ 100ಕ್ಕೂ ಹೆಚ್ಚು ಮಕ್ಕಳನ್ನು ಪಡೆಯುವ ಆಸೆ ಹೊಂದಿದ್ದಾಳೆ. ರಷ್ಯಾ ನಿವಾಸಿಯಾಗಿರುವ ಕ್ರಿಸ್ಟಿನಾ ಜಾರ್ಜಿಯಾದಲ್ಲಿ ತನ್ನ ಕುಟುಂಬದ ಜೊತೆ ವಾಸವಾಗಿದ್ದಾಳೆ. ಆಕೆ ಪತಿ ಕೋಟ್ಯಾಧಿಪತಿ.
ಪ್ರಸ್ತುತ ದಂಪತಿಗೆ 22 ಮಕ್ಕಳಿದ್ದಾರೆ. 26 ವರ್ಷದ ಹುಡುಗಿ 22 ಮಕ್ಕಳನ್ನು ಹೊಂದಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡಬಹುದು.
ಆದರೆ, ಮಾಹಿತಿಯ ಪ್ರಕಾರ ಆಕೆಯ ಹಿರಿಯ ಮಗಳು 8 ವರ್ಷದ ವಿಕ್ಟೋರಿಯಾ ಮಾತ್ರ ಅವಳ ಹೊಟ್ಟೆಯಿಂದಲೇ ಜನಿನಿಸಿರುವ ಮಗು. ಉಳಿದ 21 ಮಕ್ಕಳು ಬಾಡಿಗೆ ತಾಯ್ತನದ ಮೂಲಕ ಜನಿಸಿವೆ. ಈಗಾಗಲೇ ಆಕೆ ಬಾಡಿಗೆ ತಾಯ್ತನಕ್ಕಾಗಿ ಸುಮಾರು 1.4 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದಾಳೆ.


