ಉತ್ತರಾಖಂಡದ ಹರಿದ್ವಾರ ಜಿಲ್ಲೆಯಲ್ಲಿ ಪಿಟ್ ಬುಲ್ ದಾಳಿಯಲ್ಲಿ 70 ವರ್ಷದ ಮಹಿಳೆಯೊಬ್ಬರು ಗಂಭೀರ ಗಾಯಗೊಂಡಿದ್ದಾರೆ. ಘಟನೆಯ ನಂತರ, ವೃದ್ಧೆಯ ಮಗ ನಾಯಿ ಮಾಲೀಕರ ವಿರುದ್ಧ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರೂರ್ಕಿ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯ ಪ್ರಭಾರಿ ಆರ್.ಕೆ. ಸಕ್ಲಾನಿ ಪ್ರಕಾರ, ಧಂದೇರಾ ನಿವಾಸಿಯಾಗಿರುವ ಮಹಿಳೆ, ನೆರೆಹೊರೆಯಲ್ಲಿ ಯಾರನ್ನೋ ಭೇಟಿ ಮಾಡಲು ಹೋಗುತ್ತಿದ್ದಾಗ ಪಿಟ್ ಬುಲ್ ದಾಳಿ ಮಾಡಿದೆ. ದೂರು ದಾಖಲಿಸಿಕೊಂಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


