ತೆಲಂಗಾಣದಲ್ಲಿ ಅಪರೂಪದ ಘಟನೆಯೊಂದು ನಡೆದಿದ್ದು, ಮಗುವೊಂದು ಮಂಗನಂತೆ ಬಾಲದೊಂದಿಗೆ ಹುಟ್ಟಿದೆ. ಇದೀಗ ಮಗುವಿನ ಬಾಲವನ್ನು ವೈದ್ಯರು ಶಸ್ತ್ರಚಕಿತ್ಸೆ ಮಾಡಿ ತೆಗೆದುಹಾಕಿದ್ದಾರೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮಹಿಳೆಯೊಬ್ಬರು ಬಾಲವಿದ್ದ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವಿಗೆ ಮೂರು ತಿಂಗಳಾಗುವ ಹೊತ್ತಿಗೆ ಬಾಲ 15 ಸೆಂ.ಮೀ ಬೆಳೆದಿದೆ. ಇದರಿಂದ ಆತಂಕಗೊಂಡ ಪೋಷಕರು ಬೀಬಿ ಏಮ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದರು.
ಅಲ್ಲಿ ವೈದ್ಯರು ಬಾಲ ಮಗುವಿನ ಬೆನ್ನು ಮೂಳೆಯೊಂದಿಗೆ ಕೂಡಿಕೊಂಡಿರುವುದನ್ನು ಗುರುತಿಸಿ, ಶಸ್ತ್ರಚಿಕಿತ್ಸೆ ಮಾಡಿ ಬಾಲವನ್ನು ಕತ್ತರಿಸಿದ್ದಾರೆ. ಇದೀಗ ಆಪರೇಷನ್ ನಡೆದು ಆರು ತಿಂಗಳಾಗಿದ್ದು, ಮಗು ಸಂಪೂರ್ಣವಾಗಿ ಚೇತರಿಸಿಕೊಂಡಿದೆ.
ಆದರೆ ಶಸ್ತ್ರಚಿಕಿತ್ಸೆಯಾದ ಬಳಿಕ ಮಗುವಿಗೆ ನರ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಮಗು ಆರೋಗ್ಯದಿಂದ ಇರುವುದು ಅಪರೂಪ. ಜಗತ್ತಿನಲ್ಲಿ ಇಂತಹ ಕೇವಲ 40 ಪ್ರಕರಣಗಳನ್ನಷ್ಟೇ ಗುರುತಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA