ವಿದೇಶಿ ಪ್ರಜೆಯೊಬ್ಬರು ಕಳೆದುಕೊಂಡ ವಸ್ತುಗಳು ಸೇಫ್ಟಿ ಐಲ್ಯಾಂಡ್ ಸಹಾಯದಿಂದ ಕೆಲವೇ ಗಂಟೆಗಳಲ್ಲಿ ಪತ್ತೆಯಾದ ಘಟನೆ ಸೋಮವಾರ ಅಶೋಕನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಾಲ್ಡಿವ್ ಮೂಲದ ಫೋಟೋಗ್ರಾಫರ್ ಕಳೆದುಕೊಂಡಿದ್ದ ಲ್ಯಾಪ್‌ಟಾಪ್, ಮಾಲೀವ್ ಕರೆನ್ಸಿ ಮತ್ತಿತರ ವಸ್ತುಗಳಿದ್ದ ಬ್ಯಾಗನ್ನ ಪತ್ತೆ ಹಚ್ಚಿ ಹಸ್ತಾಂತರಿಸುವಲ್ಲಿ ಅಶೋಕನಗರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಸೌತ್ ಏಷ್ಯನ್ ಫುಟ್‌ಬಾಲ್ ಫೆಡರೇಶನ್ ಚಾಂಪಿಯನ್ ಶಿಪ್ ಗಾಗಿ ಮಾಲ್ಡಿವ್ ತಂಡ ಬೆಂಗಳೂರಿಗೆ ಬಂದಿದೆ. ತಂಡದೊಂದಿಗೆ ಬಂದಿದ್ದ ಫೋಟೋಗ್ರಾಫರ್ ಹಸನ್ ಸಿಮಾಹ್ ನಿನ್ನೆ ಸಂಜೆ ತಮ್ಮ ಸ್ನೇಹಿತರೊಂದಿಗೆ ಆಟೋದಲ್ಲಿ ಎಂ. ಜಿ. ರಸ್ತೆಯ ಗರುಡಾ ಮಾಲ್ ಗೆ ತೆರಳಿದ್ದರು. ಆಟೋದಿಂದ ಇಳಿಯುವಾಗ ತಮ್ಮ ಲ್ಯಾಪ್‌ಟಾಪ್, ಪಾಸ್‌ಪೋರ್ಟ್, ಕ್ಯಾಮೆರಾ, ಮಾಲೀವ್ ಕರೆನ್ಸಿಯಿದ್ದ ಬ್ಯಾಗನ್ನ ಮರೆತು ಇಳಿದಿದ್ದರು. ಏನು ಮಾಡಬೇಕೆಂದು ಅರಿಯದೇ ಕಂಗಾಲಾಗಿದ್ದ ಹಸನ್ ಗೆ ಸ್ಥಳಿಯರು ಅಲ್ಲೇ ಇದ್ದ ಸೇಫ್ಟಿ ಐಲ್ಯಾಂಡ್ ಸಹಾಯ ಪಡೆಯುವಂತೆ ಸೂಚಿಸಿದ್ದರು. ಅದರಂತೆ ಸೇಫ್ಟಿ ಐಲ್ಯಾಂಡ್ ಮೂಲಕ ಹಸನ್ ಬೆಂಗಳೂರು ಪೊಲೀಸ್ ನಿಯಂತ್ರಣ ಕೊಠಡಿಯನ್ನ ಸಂಪರ್ಕಿಸಿದ್ದರು.
ಅಗತ್ಯ ಮಾಹಿತಿಗಳನ್ನ ಪಡೆದ ನಿಯಂತ್ರಣ ಕೊಠಡಿಯ ಸಿಬ್ಬಂದಿ ಸಿಸಿಟಿವಿ ದೃಶ್ಯ ಪರಿಶೀಲಿಸಿ ತಕ್ಷಣ ಅಶೋಕನಗರ ಠಾಣಾ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಕೂಡಲೇ ಎಚ್ಚೆತ್ತ ಅಶೋಕನಗರ ಠಾಣಾ ಹೊಯ್ಸಳ ಸಿಬ್ಬಂದಿ ಆಟೋವನ್ನ ಪತ್ತೆಮಾಡಿ ಹಸನ್ ರ ಬ್ಯಾಗ್ ಹಿಂದಿರುಗಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


