ಬೆಂಗಳೂರು: ಒಬ್ಬನೇ ಒಬ್ಬ ಪ್ರಯಾಣಿಕನಿಗಾಗಿ ಬಿಎಂಟಿಸಿ ವಾಯು ವಜ್ರ ಬಸ್ ಸಂಚರಿಸಿದ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಹರಿಹರನ್ ಎಸ್.ಎಸ್. ಎಂಬ ಪ್ರಯಾಣಿಕರೊಬ್ಬರು ತನ್ನ ಅನುಭವವನ್ನು ಹಂಚಿಕೊಂಡಿದ್ದಾರೆ.
ಪ್ರಯಾಣಿಕನು ಬಸ್ ಚಾಲಕ ಮತ್ತು ನಿರ್ವಾಹಕರ ಸಹಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಬೆಂಗಳೂರಿನ ವಿಮಾನ ನಿಲ್ದಾಣದಿಂದ ಹಿಂತಿರುಗುತ್ತಿದ್ದಾಗ, ಈ ಇಬ್ಬರು ನನಗಾಗಿ ಸಮಯಕ್ಕೆ ಬಸ್ ಓಡಿಸಿದರು. ಅವರಿಂದ ನನಗೆ ಉತ್ತಮ ಭಾಂಧವ್ಯ ಸಿಕ್ಕಿತು ಎಂದು ಸೆಲ್ಪಿ ಹಂಚಿಕೊಂಡಿದ್ದಾರೆ.


