ಬೆಂಗಳೂರು: ಬಾಣಸವಾಡಿಯಲ್ಲಿ ಇತ್ತೀಚೆಗೆ ತಮಿಳುನಾಡಿನ ನಟೋರಿಯಸ್ ರೌಡಿ ಮೇಲೆ ದಾಳಿ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿಸಂತೆ ಪ್ರಕರಣ ಭೇದಿಸಿರುವ ಬಾಣಸವಾಡಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ನಟೋರಿಯಸ್ ರೌಡಿಯಾಗಿರುವ ಗುರುಸ್ವಾಮಿ ಮೇಲೆ ವಿರೋಧಿ ಬಣ ಹತ್ಯೆಗೆ ಸ್ಕೆಚ್ ಹಾಕಿ ದಾಳಿ ಮಾಡಿತ್ತು. ಸದ್ಯ ಈ ಪ್ರಕರಣದಲ್ಲಿ ಒಟ್ಟು ಐವರು ಆರೋಪಿಗಳ ಪೈಕಿ ಮೂವರನ್ನು ಬಂಧಿಸಲಾಗಿದೆ. ವಿನೋದ ಕುಮಾರ್, ಪ್ರಸನ್ನ, ಕಾರ್ತಿಕ್ ಬಂಧಿತ ಆರೋಪಿಗಳಾಗಿದ್ದು, ನವೀನ್ ಹಾಗೂ ತುಪಾಕಿ ವಿಜಯ್ ಬಂಧನಕ್ಕೆ ಬಲೆ ಬೀಸಲಾಗಿದೆ.


