ತುಮಕೂರು: ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಖ್ಯವಾಗಿ ಬಡ್ಡಿ ದಂಧೆ ಕೋರರಿಂದ ಕಿರುಕುಳಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಮಾಹಿತಿ ಲಭ್ಯವಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ.
ತುಮಕೂರು ನಗರದ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿ ಶವಗಳ ಅಂತಿಮ ದರ್ಶನ ಮಾಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮೃತಪಟ್ಟಿರುವ ಕುಟುಂಬದ ಯಜಮಾನ ಗರೀಬ್ ಸಾಬ್ ಎಂಬವರು ಶಿರಾದಿಂದ ತುಮಕೂರು ನಗರಕ್ಕೆ ವಲಸೆ ಬಂದಿದ್ದರು. ತುಮಕೂರು ನಗರದಲ್ಲಿ ಚಿಕನ್ ಕಬಾಬ್ ಸೆಂಟರ್ ನಡೆಸಿಕೊಂಡು ಜೀವನ ನಡೆಸುತ್ತಿದ್ದರು. ಅಲ್ಲದೆ ವ್ಯಾಪಾರ ವಹಿವಾಟಿಗಾಗಿ ಒಂದುವರೆ ಲಕ್ಷ ರೂಗಳನ್ನು ಸಾಲವಾಗಿ ಪಡೆದಿದ್ದರೂ. ಅಲ್ಲದೆ ಪ್ರತಿ ತಿಂಗಳು ಬಡ್ಡಿ ಹಣವನ್ನು ಕಟ್ಟುತ್ತಿದ್ದರು. ಆದರೆ ಇವರ ವ್ಯಾಪಾರದಲ್ಲಿ ಹಿನ್ನಡೆಯಾಗಿದ್ದರಿಂದ ಬಡ್ಡಿ ಹಣವನ್ನು ಕಟ್ಟಲು ಸಾಧ್ಯವಾಗಿರಲಿಲ್ಲ ಆದರೆ ಬಡ್ಡಿ ದಂಧೆ ಕೋರರು ಬಡ್ಡಿ ಹಣಕ್ಕಾಗಿ ಪೀಡಿಸುತ್ತಿದ್ದರು ಎಂಬುದು ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದರು.
ಡೆತ್ ನೋಟ್ ನಲ್ಲಿ ಗರೀಬ್ ಸಾಬ್ ಎಂಬುವವರು ಬರೆದಿಟ್ಟಿರುವ ಆರೋಪಿಗಳ ಹೆಸರನ್ನು ಪರಿಶೀಲಿಸಲಾಗಿದ್ದು ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.
ತುಮಕೂರು ಜಿಲ್ಲೆಯಲ್ಲಿ ಈ ರೀತಿ ಬಡ್ಡಿ ವ್ಯವಹಾರ ಹಾಗೂ ಬಡ್ಡಿ ದಂಧೆ ಕೋ ರರಿಂದ ಒಂದು ಕುಟುಂಬವೇ ಪ್ರಾಣ ಕಳೆದುಕೊಂಡಿರುವುದು ಗಾಬರಿ ಹುಟ್ಟಿಸಿದೆ. ಹೀಗಾಗಿ ಈ ಬಡ್ಡಿ ವ್ಯವಹಾರಕ್ಕೆ ಕಡಿಯೋ ಹಣ ಹಾಕುವ ದೃಷ್ಟಿಯಿಂದ ಪೂರಕ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ನಿಜಕ್ಕೂ ಬಹಳ ನೋವು ತರುವ ವಿಷಯ. ಕುಟುಂಬದವರು ಯಾರೂ ಬೇರೆಯವರು ಇಲ್ಲ. ತಂದೆ, ತಾಯಿ, ಸಹೋದರರು ಇದ್ದರು. ಸಾಲ ತೀರಿಸಲು ಆಗಿಲ್ಲ. ಕಟ್ಟಲು ಒತ್ತಾಯ ಮಾಡುತ್ತಿದ್ದರು. ಕಟ್ಟಲು ಆಗುತ್ತಿರಲಿಲ್ಲ ಎಂದರು.
ಹೆಸರನ್ನು ಬರೆದಿಟ್ಟವರನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರು ತನಿಖೆ ಮಾಡುತ್ತಾರೆ. ಮುಂದೆ ಏನು ಮಾಡಬೇಕು ಅಂತ ನಿರ್ಧಾರ ಮಾಡ್ತಾರೆ ಎಂದರು.
ಮುಖ್ಯಮಂತ್ರಿಗೆ ತಿಳಿಸಿ ಆದೇಶದಂತೆ ಪರಿಹಾರ ನೀಡುತ್ತೇವೆ. ಬಡ್ಡಿ ವ್ಯವಹಾರ ಇದೆ, ಎಂದು ಜನರು ಮಾತನಾಡುತ್ತಾರೆ. ಅದನ್ನು ಗಂಭೀರವಾಗಿ ತೆಗದುಕೊಂಡು, ಬಡ್ಡಿ ವ್ಯವಹಾರವನ್ನು ನಿಲ್ಲಿಸಲು ಕ್ರಮತೆಗೆದುಕೊಳ್ಳಿತ್ತೇವೆ ಎಂದರು.
ತನಿಖೆಯ ನಂತರ ಸತ್ಯಾಂಶ ತಿಳಿಯಲಿದೆ. ಆತ್ಮಹತ್ಯೆಯ ಗಂಭೀರತೆ ಗೊತ್ತಿಲ್ಲ. ತನಿಖೆಯ ನಂತರ ಏನು ಕಾರಣ ಎಂಬುವುದು ಪತ್ತೆ ಹಚ್ಚಲಾಗುತ್ತದೆ. ಕಡಿಮೆ ಹಣಕ್ಕೆ ಐದು ಜನ ಸಾಯುವುದು ಸಾಮಾನ್ಯ ಅಲ್ಲ. ತನಿಖೆಯ ನಂತರ ನಿಜ ಸ್ಥಿತಿ ತಿಳಿಯಲಿದೆ ಎಂದರು.
ಮುಂದೆ ಜಿಲ್ಲೆ ಪಟ್ಟಣದಲ್ಲಿ ಮೀಟರ್ ಬಡ್ಡಿ ಮಾಡುವರ , ದಂಧೆ ನಡೆಸುವವರ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ. ಅಮಾಯಕರಿಗೆ ಸಾಲ ಕೊಟ್ಟು ಬಡ್ಡಿ ಪಡೆಯುವುದು ಜಾಸ್ತಿಯಾಗಿದೆ. ತನಿಖೆಯ ನಂತರ ಎಲ್ಲ ವಿಚಾರಗಳಲ್ಲಿ ಬಯಲಿಗೆ ಬರಲಿವೆ ಎಂದರು.
ಇಂತಹ ಘಟನೆ ಮರುಕಳಿಸಬಾರದು. ಇದನ್ನು ತಡೆಯುವಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಗೃಹ ಇಲಾಖೆಯಲ್ಲಿ ವರ್ಗಾವಣೆ ದಂಧೆ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಅಂತಹದು ಏನಾದರೂ ಇದ್ದರೆ ಗಮನಕ್ಕೆ ತಂದರೆ ತನಿಖೆ ನಡೆಸಲಾಗುವುದು. ಹಣ ನಮಗೆ ಕೊಟ್ಟಿದಾರಾ. ಏನು ಮಾತನಾಡಿದ್ದಾರಂತ ತನಿಖೆ ಮಾಡುತ್ತೇವೆ ಎಂದರು.


