ಹಾವುಗಳು ಮನೆಯೊಳಗೆ ಕಾಣಿಸಿಕೊಂಡು ಜನರನ್ನು ಭಯಹುಟ್ಟಿಸುವುದು ಇತ್ತೀಚಿನ ದಿನಗಳಲ್ಲಿ ಹೆಚಹಚಾಗಿ ಕಂಡು ಬರುತ್ತಿದ್ದು, ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಮನೆಯ ಸೀಲಿಂಗ್ ಫ್ಯಾನ್ ನಲ್ಲಿ ನಾಗರ ಹಾವೊಂದು ಸುರಳಿ ಸುತ್ತಿ ಕುಳಿತುಕೊಂಡಿರುವುದು ಭಯವನ್ನು ಹುಟ್ಟಿಸುತ್ತದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಕೆಟ್ಟು ಹೋದ ಹಳೆಯ ಸೀಲಿಂಗ್ ಫ್ಯಾನ್ ಮೇಲೆ ಹಾವು ಹೋಗಿ ಕೂತಿದೆ. ಹಾವು ಸೀಲಿಂಗ್ ಫ್ಯಾನ್ ಮೇಲೆ ಹೋಗುತ್ತಿದ್ದಂತೆ ಫ್ಯಾನ್ ತಿರುಗಲು ಪ್ರಾರಂಭಿಸಿದ್ದು, ಈ ವೇಳೆ ಎಡೆ ಎತ್ತಿದ ಈ ನಾಗರಹಾವು ಫ್ಯಾನಿನ ಮೇಲೆ ಸುರುಳಿ ಸುತ್ತಿಕೊಂಡು ಕುಳಿತುಕೊಂಡಿದೆ.
ಈ ವಿಡಿಯೋವನ್ನು ಚಂದ್ರಶೇಖರನ್ 6102 ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು, ಈ ವಿಡಿಯೋವನ್ನು ಶೇರ್ ಮಾಡಲಾಗುತ್ತಿದ್ದಂತೆ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದ್ದು, ನೆಟ್ಟಿಗರು ಈ ವಿಡಿಯೋ ನೋಡುತ್ತಿದ್ದಂತೆ ಭಯಭೀತರಾಗಿದ್ದಾರೆ.
ವೈರಲ್ ಆಗಿರುವ ಈ ವಿಡಿಯೋಗೆ ನೆಟ್ಟಿಗರು ಕಾಮೆಂಟ್ ಸೆಕ್ಷನ್ ನಲ್ಲಿ ಕೆಲವರು ನಾಗಪ್ಪನಿಗೆ ಭಕ್ತಿಯಿಂದ ನಮಸ್ಕರಿಸಿದರೆ, ಇನ್ನು ಕೆಲವರು ಭಯ ವ್ಯಕ್ತಪಡಿಸುವ ಮೂಲಕ ಕಾಮೆಂಟ್ ಗಳನ್ನು ಮಾಡಿದ್ದಾರೆ.


