ನವದೆಹಲಿ: ದೃಶ್ಯಂ ಸಿನಿಮಾದ ದೃಶ್ಯದಿಂದ ಪ್ರೇರೇಪಣೆಗೊಂಡು ದಂಪತಿ, ಯುವತಿಯೊಬ್ಬಳನ್ನು ಹತ್ಯೆ ಮಾಡಿ, ಆಕೆಯ ಚಿನ್ನದ ಸರವನ್ನು ಕದ್ದಿರುವ ಘಟನೆ ಗುಜರಾತ್ ನಾಡಿಯಾಡ್ ನಲ್ಲಿ ನಡೆದಿದೆ.
ಮಲಯಾಳಂ ಮೂಲದ ದೃಶ್ಯಂ ಸಿನಿಮಾ ಬಾಲಿವುಡ್ ಗೆ ರಿಮೇಕ್ ಆಗಿತ್ತು. ಈ ಸಿನಿಮಾದಿಂದ ಪ್ರೇರೇಪಣೆಗೊಂಡು ಜಯದೀಪ್ ಸೋನಿ ಮತ್ತು ಅವರ ಪತ್ನಿ ಲತಾ ದಂಪತಿಗಳು ತಮ್ಮ ಆರ್ಥಿಕ ಸಂಕಷ್ಟವನ್ನು ನಿವಾರಿಸಲು ಕೊಲೆ ಮಾಡಿದ್ದಾರೆ.
ಪಾಕವಿಧಾನದ ಬಗ್ಗೆ ಚರ್ಚಿಸುವ ನೆಪದಲ್ಲಿ ಅವರು ಸೆಪ್ಟೆಂಬರ್ 28 ರಂದು ಸೌಮ್ಯಾ ಅವರನ್ನು ತಮ್ಮ ಮನೆಗೆ ಕರೆದೊಯ್ದರು. ಒಳಗೆ ಪ್ರವೇಶಿಸಿದ ನಂತರ, ಅವರು ಅವಳನ್ನು ಉಸಿರುಗಟ್ಟಿಸಿ ಮೊಂಡು ವಸ್ತುವಿನಿಂದ ಹೊಡೆದು ಕೊಂದರು ಎಂದು ನಾಡಿಯಾಡ್ ಗ್ರಾಮೀಣ ಪೊಲೀಸ್ ಇನ್ಸ್ಪೆಕ್ಟರ್ ಜೆ.ಎಚ್.ವಘೇಲಾ ತಿಳಿಸಿದ್ದಾರೆ.
ಕೊಲೆಯ ನಂತರ ದಂಪತಿ ಗೋಣಿ ಚೀಲದಲ್ಲಿ ಮೃತದೇಹವನ್ನು ತುಂಬಿಸಿ ದ್ವಿಚಕ್ರ ವಾಹನದಲ್ಲಿ ಮಾಹಿ ಕಾಲುವೆಗೆ ಸಾಗಿಸಿ ವಿಲೇವಾರಿ ಮಾಡಿದ್ದರು. ಮರುದಿನ, ಜಯದೀಪ್ ಮತ್ತು ಲತಾ ಸೌಮ್ಯ ಅವರ 70 ಗ್ರಾಂ ಚಿನ್ನದ ಸರವನ್ನು ಸುಮಾರು 3 ಲಕ್ಷ ರೂ.ಗೆ ಮಾರಾಟ ಮಾಡಿ, ಆ ಹಣವನ್ನು ತಮ್ಮ ಮೂವರು ಮಕ್ಕಳಿಗೆ ದ್ವಿಚಕ್ರ ವಾಹನ ಮತ್ತು ಹೊಸ ಬಟ್ಟೆಗಳನ್ನು ಖರೀದಿಸಲು ಬಳಸಿದ್ದಾರೆ
ಸೆಪ್ಟೆಂಬರ್ 30 ರಂದು ಮಹಿ ಕಾಲುವೆಯಲ್ಲಿ ಸೌಮ್ಯಳ ಮೃತದೇಹ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯು ನೀರಿನಲ್ಲಿ ಮುಳುಗಿರುವುದು ಸಾವಿಗೆ ಕಾರಣ ಎಂದು ಉಲ್ಲೇಖಿಸಲಾಗಿತ್ತು.
ಸೌಮ್ಯಾಳ ಪತಿ ಅಂತಿಮ ವಿಧಿಗಳಿಗಾಗಿ ತಮಿಳುನಾಡಿಗೆ ತೆರಳಿದ್ದರಿಂದ, ಪೊಲೀಸರಿಗೆ ಆರಂಭದಲ್ಲಿ ಹೆಚ್ಚಿನ ತನಿಖೆ ನಡೆಸಲು ಸಾಧ್ಯವಾಗಲಿಲ್ಲ. ಅವರು ಹಿಂದಿರುಗಿದ ನಂತರ, ಪೊಲೀಸರು ಪ್ರಕರಣದ ಬಗ್ಗೆ ಆಳವಾಗಿ ತನಿಖೆ ನಡೆಸಿದರು. ಈ ವೇಳೆ ದಂಪತಿಯ ಕಳ್ಳಾಟ ಬಯಲಾಗಿದೆ.
ಜಯದೀಪ್ ಮತ್ತು ಲತಾಗೆ ಸೌಮ್ಯಳ ಜೊತೆಗೆ ಉತ್ತಮ ಬಾಂಧವ್ಯವಿತ್ತು ಅನ್ನೋದು ಪೊಲೀಸರಿಗೆ ತಿಳಿದು ಬಂದು. ಆದರೆ ಘಟನೆ ನಡೆದ ದಿನ ನಾವು ಊರಲ್ಲಿ ಇರಲಿಲ್ಲ ಎಂದ ದಂಪತಿ, ತಾವು ಪ್ರಯಾಣಿಸಿದ್ದ ಟಿಕೆಟ್ ನ್ನು ಸಾಕ್ಷಿಯಾಗಿ ನೀಡಿದ್ದಾರೆ. ಆದ್ರೆ, ಸಿಸಿ ಕ್ಯಾಮರಾದಲ್ಲಿ ದಂಪತಿ ದ್ವಿಚಕ್ರ ವಾಹನದಲ್ಲಿ ಸೌಮ್ಯಳಾ ಮೃತದೇಹವನ್ನು ಸಾಗಿಸಿರುವುದು ಪತ್ತೆಯಾಗಿದೆ. ಹೀಗಾಗಿ ದಂಪತಿ ಸಿಕ್ಕಿಬಿದ್ದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q