ವರದಿ: ಮಂಜುಸ್ವಾಮಿ ಎಂ.ಎನ್.
ಕೊರಟಗೆರೆ: ಮಹಿಳೆಯನ್ನು ಭೀಕರವಾಗಿ ಕೊಲೆ ಮಾಡಿದ ನಂತರ ಶವವನ್ನು ತುಂಡು ತುಂಡಾಗಿ ಕತ್ತರಿಸಿದ ಪ್ರಕರಣದಲ್ಲಿ ಶುಕ್ರವಾರವು ಸಹ ಮತ್ತೆ ಕೊರಟಗೆರೆ ತಾಲ್ಲೂಕಿನ ಸುತ್ತ–ಮುತ್ತಲಿನ 12 ಸ್ಥಳಗಳಲ್ಲಿ ಮಹಿಳೆಯ ಶವದ ತುಂಡಿನ ಪಾಕೇಟ್ ಜೊತೆಯಲ್ಲಿ ಕಬ್ಬಿಣದ ಮೇಟಲ್ ಪೀಸ್‌ಗಳು ಸಹ ಪೊಲೀಸರಿಗೆ ಸ್ಥಳ ಪರಿಶೀಲನೆ ವೇಳೆ ದೊರೆತಿವೆ.
ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಚಿಂಪುಗಾನಹಳ್ಳಿ ಸೇರಿದಂತೆ 8 ಕಡೆ ಮಹಿಳೆಯ ಕೈಗಳು ಮತ್ತು ದೇಹದ ಭಾಗಗಳು ಸಿಕ್ಕಿದ್ದವು. ಮತ್ತೆ ಶುಕ್ರವಾರ ರಾತ್ರಿ ಸಿದ್ದರಬೆಟ್ಟ ಮತ್ತು ಮಲ್ಲೇಕಾವು ಸುತ್ತಮುತ್ತ 10 ಕಡೆಯ ವಿವಿಧ ಸ್ಥಳಗಳಲ್ಲಿ ಕಪ್ಪು ಕವರ್ ನ ಪಾಕೇಟ್ ನಲ್ಲಿ ಮಹಿಳೆಯ ಕಾಲು, ದೇಹ ಸೇರಿದಂತೆ ತಲೆಯು ಸಹ ಪತ್ತೆಯಾಗಿದೆ.
ಕೊರಟಗೆರೆಯ ಸಿದ್ದರಬೆಟ್ಟದ ಸಮೀಪ ಕೊಳೆತ ಸ್ಥಿತಿಯಲ್ಲಿ ಕಾಲುಗಳು ಪತ್ತೆಯಾಗಿದೆ, ಮರೇನಾಯಕನಹಳ್ಳಿ ಗ್ರಾಮದಲ್ಲಿ ಮಹಿಳೆಯ ಮಾಂಸದ ತುಂಡಿನ ಪ್ಯಾಕೆಟ್ ನಲ್ಲಿ ಹಸಿರು ಬಣ್ಣದ ಬಟ್ಟೆ ಪತ್ತೆ, ಗಟ್ಟಿತಿಮ್ಮನಹಳ್ಳಿ, ಮಲ್ಲೇಕಾವು, ಚಿಕ್ಕಾವಳಿ ಕೆರೆ, ಲಿಂಗಾಪುರ, ಜೋನಿಗರಹಳ್ಳಿ ಸೇರಿದಂತೆ ಇಂದು ೧೨ ಕಡೆಗಳಲ್ಲಿ ಮಹಿಳೆಯ ಶವದ ತುಂಡುಗಳು ಸಿಕ್ಕಿದೆ. ಮಹಿಳೆಯ ತಲೆಗೆ ಬಲವಾದ ಪೆಟ್ಟು ಸಹ ಬಿದ್ದಿದ್ದು ಗುರುತು ಸಿಗದಂತೆ ಆಗಿದೆ ಎನ್ನಲಾಗಿದೆ.
15 ಜನರ ತಂಡದಿಂದ ತನಿಖೆ ಪ್ರಾರಂಭ:
ತುಮಕೂರು ಎಸ್ಪಿ ಅಶೋಕ್ ಮಾರ್ಗದರ್ಶನದಲ್ಲಿ ತುಮಕೂರು ಮತ್ತು ಶಿರಾ ಡಿವೈಎಸ್ಪಿ, ಕೊರಟಗೆರೆ, ಪಾವಗಡ, ಮಧುಗಿರಿ ಸಿಪಿಐ ಮತ್ತು 6 ಜನ ಪಿಎಸ್ಐ ಸೇರಿದಂತೆ 15 ಕ್ಕೂ ಅಧಿಕ ಕ್ರೈಂ ಪೊಲೀಸರ ತಂಡದಿಂದ ಪ್ರಕರಣದ ತನಿಖೆ ನಡೆಯುತ್ತಿದೆ. ಹಂತಕನ ಸೆರೆಗಾಗಿ ಹಗಲು–ರಾತ್ರಿ ಎನ್ನದೇ ಪೊಲೀಸರು ವಿಶೇಷ ಕಾರ್ಯಚರಣೆ ನಡೆಸುತ್ತಿದ್ದಾರೆ.
ಕಬ್ಬಿಣದ ಮೇಟಲ್ ಪೀಸ್ ಪತ್ತೆ:
ಮಹಿಳೆಯ ಶವದ ದೇಹದ ತುಂಡಿನ ಜೊತೆ ಸಿಕ್ಕಿರುವ ಎಲ್ಲ ಪಾಕೇಟ್ ನಲ್ಲಿ ಕಬ್ಬಿಣದ ಮೇಟಲ್ ಪೀಸ್ ಗಳು ಪತ್ತೆಯಾಗಿವೆ. ಕೊರಟಗೆರೆ ಕ್ಷೇತ್ರದ ನಾಲ್ಕು ದಿಕ್ಕಿನ ರಸ್ತೆ ಬದಿಗಳಲ್ಲಿ ಶವದ ತುಂಡುಗಳನ್ನು ಹಾಕಿರುವ ಹಿಂದೆ ವಾಮಚಾರದ ಶಂಕೆಯು ವ್ಯಕ್ತವಾಗಿದೆ.
ಕೊರಟಗೆರೆಯ ಜನತೆ ಎಂದಿಗೂ ಕಂಡಿರದ ಘಟನೆ ನಾವು ನೋಡುತ್ತಿದ್ದೇವೆ. ಮಹಿಳೆಯನ್ನು ಇಷ್ಟು ಬರ್ಬರವಾಗಿ ಕೊಲೆ ಮಾಡಿದ್ದು ಇಂತಹ ಕೃತ್ಯದಿಂದ ಮನುಜ ಕುಲವು ಬೆಚ್ಚಿ ಬಿದ್ದಿದೆ. ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣಕ್ಕೆ ಕಾರಣವಾದ ಆರೋಪಿಗೆ ನಮ್ಮ ಪೊಲೀಸರು ತಕ್ಕ ಶಿಕ್ಷೆ ನೀಡಬೇಕಿದೆ.
— ದೇವರಾಜು. ಸ್ಥಳೀಯ ವಾಸಿ. ಚಿಂಪುಗಾನಹ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC