ತುಮಕೂರು: ಹಣಕ್ಕಾಗಿ ತಾಯಿ ಇಲ್ಲದ ಬಾಲಕಿಗೆ ಕಿರುಕುಳ ನೀಡಿ, ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟ ಅಮಾನವೀಯ ಘಟನೆ ತುಮಕೂರಿನಲ್ಲಿ ನಡೆದಿದೆ.
ನಂಜಮ್ಮ ಇಸ್ತ್ರಿಪೆಟ್ಟಿಗೆಯಿಂದ ಸುಟ್ಟ ಮಹಿಳೆ, ಬಾಲಕಿ ಲಕ್ಷ್ಮಿ, ಬ್ಯಾಂಕ್ ಖಾತೆಯಲ್ಲಿದ್ದ 4 ಲಕ್ಷ ರೂಗಳ ಹಣವನ್ನು ಬಿಡಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡಿ ಬಾಲಕಿ ತೊಡೆಗೆ ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟು ಕಿರುಕುಳ ನೀಡಿದ್ದಾಳೆ, ಈ ಕೃತ್ಯಕ್ಕೆ ನಂಜಮ್ಮನ ಮಗ ಬಸವರಾಜ ಇಸ್ತ್ರಿಪೆಟ್ಟಿಗೆಯಿಂದ ಸುಡುವಾಗ ಬಾಲಕಿ ಕಿರುಚಾಡದಂತೆ ಬಾಯಿಯನ್ನು ಗಟ್ಟಿಯಾಗಿ ಮುಚ್ಚಿ ನಂಜಮ್ಮನಿಗೆ ಸಾಥ್ ನೀಡಿದ್ದಾನೆ ಎನ್ನಲಾಗಿದೆ.
ಬಾಲಕಿಯ ತಾಯಿ ನರಸಮ್ಮ ಕಳೆದ ನಾಲ್ಕು ವರ್ಷಗಳ ಹಿಂದೆ ಅನಾರೋಗ್ಯದಿಂದ ಸಾವಿಗೀಡಾಗಿದ್ದರು, ಸಾಯುವುದಕ್ಕು ಮುನ್ನ ತನ್ನ ಮಗಳಾದ ಲಕ್ಷ್ಮಿ ಭವಿಷ್ಯಕ್ಕಾಗಿ ಬ್ಯಾಂಕ್ ಖಾತೆಯಲ್ಲಿ ನರಸಮ್ಮ ಜಂಟಿ ಖಾತೆ ಮಾಡಿಸಿ 4 ಲಕ್ಷ ಹಣವನ್ನು ಇಟ್ಟಿದ್ದರು.
ಮಧುಗಿರಿ ತಾಲೂಕಿನ ಪೂಜಾರಹಳ್ಳಿ ಗ್ರಾಮಕ್ಕೆ ಬಂದಿದ್ದ ನಂಜಮ್ಮ, ಶಿವರಾತ್ರಿ ಹಿನ್ನೆಲೆ ಕಳೆದ ಶನಿವಾರ ಬಾಲಕಿಯನ್ನು ಶಿರಾ ತಾಲೂಕಿನ ನಿಡಘಟ್ಟ ಗ್ರಾಮಕ್ಕೆ ಕರೆದುಕೊಂಡು ಬಂದಿದ್ದಾಳೆ. ಈ ವೇಳೆ ಬಾಲಕಿ ಬ್ಯಾಂಕ್ ಖಾತೆಯಲ್ಲಿ ನಾಲ್ಕು ಲಕ್ಷ ಹಣವಿರುವ ವಿಚಾರ ತಿಳಿದುಬಂದಿದೆ. ಈ ಹಣಕ್ಕಾಗಿ ಬಾಲಕಿಗೆ ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟಿದ್ದಾಳೆ, ಬಳಿಕ ಬಿಸಿ ಬಿಸಿ ಟೀ ಮೈಲೆ ಚೆಲ್ಲಿಕೊಂಡು ಗಾಯವಾಗಿದೆ ಎಂದು ಎಲ್ಲರ ಬಳಿ ಹೇಳಿಕೊಂಡಿದ್ದಾಳೆ.
ಇನ್ನು ಬಾಲಕಿ ಲಕ್ಷ್ಮಿ 5 ನೇ ತರಗತಿ ಓದುತ್ತಿದ್ದು ಪರೀಕ್ಷೆ ಸಮಯದಲ್ಲಿ ಪರೀಕ್ಷೆಗೆ ಹಾಜರಾಗದೆ ಇದ್ದದ್ದು ಕಂಡು ಶಿಕ್ಷಕರು ಲಕ್ಷ್ಮಿ ಬಗ್ಗೆ ವಿಚಾರಿಸಿ ಗ್ರಾಮಕ್ಕೆ ಕರೆಸಿಕೊಂಡಿದ್ದಾರೆ, ಈ ವೇಳೆ ಕಾರಣ ಕೇಳಿದ ಶಿಕ್ಷಕರಿಗೆ ಅಸಲಿ ಸತ್ಯ ಬೆಳಕಿಗೆ ಬಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


