ನಂಜಪ್ಪ ವೃತ್ತದಲ್ಲಿರುವ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ದೇವರ ಮೂರ್ತಿಗೆ ಹಾಕಿದ್ದ ಮುಕುಟವನ್ನು ಕಳ್ಳತನ ಮಾಡಿದ್ದ ಆರೋಪದಡಿ ರವಿ ನಾಯ್ಡು (70) ಅವರನ್ನು ವಿ. ವಿ. ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ‘ಸ್ಥಳೀಯ ನಿವಾಸಿ ರವಿ ನಾಯ್ಡು, ಜೂನ್ 28ರಂದು ರಾತ್ರಿ ದೇವಸ್ಥಾನಕ್ಕೆ ನುಗ್ಗಿ ಕಳ್ಳತನ ಮಾಡಿ ಪರಾರಿಯಾಗಿದ್ದ. ದೇವಸ್ಥಾನ ಹಾಗೂ ಸುತ್ತಮುತ್ತಲಿನ 280 ಸಿ. ಸಿ. ಟಿ. ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿ ಸುಳಿವು ಪತ್ತೆ ಮಾಡಿ ಆರೋಪಿಯನ್ನು ಬಂಧಿಸಲಾಗಿದೆ. ಸದ್ಯ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ’ ಎಂದು ಪೊಲೀಸರು ಹೇಳಿದರು.
‘ಸಾಮಾಜಿಕ ಕಳಕಳಿ ವಿಷಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ರವಿ ನಾಯ್ಡು, ದೇಶದ ಹಲವು ರಾಜ್ಯಗಳಲ್ಲಿ ಸೈಕಲ್ ಜಾಥಾ ನಡೆಸಿದ್ದ. ಈತನ ಕೆಲಸಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ, ಕೆಲ ವರ್ಷಗಳಿಂದ ರವಿ ನಾಯ್ಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ. ಜೀವನ ಸಾಗಿಸಲು ಚಿಂದಿ ಆಯುವ ಕೆಲಸ ಸಹ ಮಾಡುತ್ತಿದ್ದ. ”ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತ, ಎಲ್ಲೆಂದರಲ್ಲಿ ಸುತ್ತಾಡುತ್ತಿದ್ದ. ಅದೇ ರೀತಿ ದೇವಸ್ಥಾನದೊಳಗೆ ಹೋಗಿ, ” 5 ಲಕ್ಷ ಮೌಲ್ಯದ ಮುಕುಟ ಕದ್ದುಕೊಂಡು ಹೋಗಿದ್ದ. ಆದರೆ, ಮುಕುಟವನ್ನು ಎಲ್ಲಿಯೂ ಮಾರಿರಲಿಲ್ಲ. ತಳ್ಳುಗಾಡಿಯೊಂದರಲ್ಲಿ ಮುಕುಟ ಮುಚ್ಚಿಟ್ಟಿದ್ದ. ಅದನ್ನು ಮಾರುವ ಉದ್ದೇಶ ಆತನಿಗೆ ಇರಲಿಲ್ಲ. ಆರೋಪಿಯನ್ನು ಬಂಧಿಸಿದ ಬಳಿಕ ಮುಕುಟ ಜಪ್ತಿ ಮಾಡಲಾಯಿತು’ ಎಂದು ಪೊಲೀಸರು ತಿಳಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


