ಮಧುಗಿರಿ: ಪೊಲೀಸ್ ಠಾಣೆ ಕಟ್ಟಡ ಕಾಮಗಾರಿಗೆ ಬಂದಿದ್ದ ಕಾರ್ಮಿಕ ಅಚಾನಕ್ಕಾಗಿ ಮೃತಪಟ್ಟ ಘಟನೆ ನಡೆದಿದೆ.
ತಾಲೂಕಿನ ಕೊಡಿಗೇನಹಳ್ಳಿ ನೂತನ ಪೊಲೀಸ್ ಠಾಣೆಯ ಕಟ್ಟಡದ ಕಾಮಗಾರಿಗೆ ಕಳೆದ ನಾಲ್ಕು ದಿನಗಳ ಹಿಂದೆ ಬಂದಿದ್ದ ಕಾರ್ಮಿಕರ ತಂಡದಲ್ಲಿದ್ದ ವಾಲ್ಮೀಕಿ ಸಹನ್ ಭಾನುವಾರ ಬೆಳಿಗ್ಗೆ 7 ಗಂಟೆ ಮದ್ಯಪಾನ ಮಾಡಿಕೊಂಡು ಸುತ್ತಾಡುತ್ತಿದ್ದು ಜಪಾನ್ ಕಾಂಡಿಮೆಂಟ್ಸ್ ಬಳಿ ಸುಮಾರು 11 ಗಂಟೆಗೆ ಕುಸಿದು ಬಿದ್ದು ಮೃತಪಟ್ಟಿದ್ದಾನೆ.
ಗುತ್ತಿಗೆದಾರ ಮಾಹಿತಿ ಇಲ್ಲದೆ ಕಟ್ಟಡ ಕೆಲಸಕ್ಕೆ ಕಾರ್ಮಿಕರನ್ನು ಕರೆದುಕೊಂಡಿದ್ದ ಪರಿಣಾಮ ಕಾರ್ಮಿಕನ ವಿಳಾಸ ಹುಡುಕಲು ಕೆಲ ಕಾಲ ಪೊಲೀಸರ ಪರದಾಡಿದರು.
ಬಿಹಾರ ಮೂಲದ ಪಲ್ಯ ಜಿಲ್ಲೆಯ ವಾಲ್ಮೀಕಿ ಸಹನ್ (35) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಸಿಪಿಐ ಹನುಮಂತರಾಯಪ್ಪ ಎಎಸ್ ಐ ರಂಗನಾಥ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು ಮೃತ ವ್ಯಕ್ತಿಯ ದೇಹವನ್ನು ತುಮಕೂರು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


