ತಮಿಳು ನಟ ಜಯಂ ರವಿ ಸೆಪ್ಟೆಂಬರ್ 9 ರಂದು ತಮ್ಮ ಪತ್ನಿ ಆರತಿಗೆ ಡಿವೋರ್ಸ್ ನೀಡುವುದಾಗಿ ಘೋಷಿಸಿದ್ದಾರೆ. ಈ ವಿಷಯದ ಬಗ್ಗೆ ರವಿ ತಮ್ಮ ಎಕ್ಸ್ ಹ್ಯಾಂಡಲ್ʼನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಈ ಕಷ್ಟದ ಸಮಯದಲ್ಲಿ ಗೌಪ್ಯತೆ ಕಾಪಾಡಲು ವಿನಂತಿಸಿದ್ದಾರೆ. 2009ರಲ್ಲಿ ಮದುವೆಯಾಗಿದ್ದ ಈ ಜೋಡಿಗೆ ಆರವ್ ಮತ್ತು ಅಯಾನ್ ಎಂಬ ಇಬ್ಬರು ಗಂಡುಮಕ್ಕಳಿದ್ದಾರೆ.
“ಬಹಳಷ್ಟು ಯೋಚನೆ, ಚಿಂತನೆ ಮತ್ತು ಚರ್ಚೆಗಳ ನಂತರ ನಾನು ಆರತಿ ಜೊತೆಗಿನ ದಾಂಪತ್ಯವನ್ನು ಅಂತ್ಯಗೊಳಿಸುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಈ ನಿರ್ಧಾರವನ್ನು ತರಾತುರಿಯಿಂದ ತೆಗೆದುಕೊಂಡಿಲ್ಲ. ಇದು ವೈಯಕ್ತಿಕ ಕಾರಣಗಳಿಂದ ತೆಗೆದುಕೊಂಡ ನಿರ್ಧಾರವೆಂದು ನಾನು ನಂಬುತ್ತೇನೆ” ಎಂದಿದ್ದಾರೆ.
ಇದಷ್ಟೇ ಅಲ್ಲದೆ, ಅಭಿಮಾನಿಗಳು ಮತ್ತು ಜನರು ತಮ್ಮ ಖಾಸಗಿತನವನ್ನು ಗೌರವಿಸುವಂತೆ ಜಯಂ ರವಿ ವಿನಂತಿಸಿದ್ದಾರೆ. “ಈ ಕಷ್ಟದ ಸಮಯದಲ್ಲಿ ನನ್ನ ಮತ್ತು ನನ್ನ ಕುಟುಂಬದ ಸದಸ್ಯರ ಗೌಪ್ಯತೆಯನ್ನು ಗೌರವಿಸಲು ನಾನು ನಿಮ್ಮೆಲ್ಲರನ್ನು ವಿನಂತಿಸುತ್ತೇನೆ. ಈ ವಿಷಯದ ಬಗ್ಗೆ ಯಾವುದೇ ಊಹೆಗಳು, ವದಂತಿಗಳು ಅಥವಾ ಆರೋಪಗಳನ್ನು ಮಾಡದಂತೆ ನಿಮ್ಮೆಲ್ಲರಲ್ಲಿ ಮನವಿ ಮಾಡಿಕೊಳ್ಳುತ್ತೇನೆ” ಎಂದು ಪೋಸ್ಟ್ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q