ತುಮಕೂರು: ಆಸ್ತಿ ಸಿಕ್ಕಿದ ಮೇಲೆ ತಂದೆಯನ್ನು ನಿರ್ಲಕ್ಷಿಸಿದ ಮಗನಿಗೆ ತಂದೆ, ಹಿರಿಯ ನಾಗರಿಕರ ಕಾನೂನಿನ ಮೂಲಕ ತಕ್ಕ ಪಾಠ ಕಲಿಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ನಗರದ ಗಾಂಧಿನಗರದ ನಿವಾಸಿ ಟಿ.ಕೆ. ಶಿವಪ್ರಸಾದ್ ಅವರು ಮನೆ ಸಹಿತ 2 ನಿವೇಶನಗಳನ್ನು ಕಿರಿಯ ಪುತ್ರ ಟಿ.ಎಸ್.ಪೃಥ್ವಿ ಪ್ರಸಾದ್ ಹೆಸರಿಗೆ 2020ರಲ್ಲಿ ನೋಂದಾಯಿತ ದಾನಪತ್ರದ ಮೂಲಕ ವರ್ಗಾವಣೆ ಮಾಡಿದ್ದರು.
ದಾನಪತ್ರದಲ್ಲಿ ಮುಂದೆಯೂ ತಮ್ಮನ್ನು ಚೆನ್ನಾಗಿ ನೋಡಿಕೊಳ್ಳುವ, ವೈದ್ಯಕೀಯ ವೆಚ್ಚ ಭರಿಸುವ ಭರವಸೆ ಹೊಂದಿರುವುದಾಗಿಯೂ ಉಲ್ಲೇಖಿಸಿದ್ದರು.
ಆದರೆ, ಆಸ್ತಿ ವರ್ಗಾವಣೆಗೊಂಡ ಬಳಿಕ ಬಳಿಕ ಪುತ್ರನ ನಡವಳಿಕೆ ಬದಲಾಗಿದ್ದು, ತಮ್ಮನ್ನು ನಿರ್ಲಕ್ಷಿಸಿ, ನಿಂದಿಸುತ್ತಾ ದೌರ್ಜನ್ಯ ವೆಸಗುತ್ತಿದ್ದಾರೆ ಎಂದು ಶಿವ ಪ್ರಸಾದ್ ಅವರು ಉಪವಿಭಾಗಾಧಿಕಾರಿಗಳ ನ್ಯಾಯಾಲಯದ ಮೊರೆಹೋಗಿದ್ದರು.
ಮಗನಿಗೆ ಮಾಡಿದ್ದ ದಾನಪತ್ರ ರದ್ದುಪಡಿಸುವಂತೆ ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣಾ ಕಾಯಿದೆಯಡಿ ಮನವಿ ಸಲ್ಲಿಸಿದ್ದ ಶಿವಪ್ರಸಾದ್ ಅವರ ಅರ್ಜಿಯನ್ನು ಪುರಸ್ಕರಿಸಿ ವಿಚಾರಣೆ ನಡೆಸಿದ ಪ್ರಕರಣದ ವಿಚಾರಣೆ ನಡೆಸಿದ ಉಪ ವಿಭಾಗಾಧಿಕಾರಿಗಳು ಹಾಗೂ ನ್ಯಾಯಿಕ ದಂಡಾಧಿಕಾರಿಗಳಾದ ನಾಹಿದಾ ಜಮ್ ಜಮ್ ಅವರು ಪೋಷಕರನ್ನು ಮಗ ಕಡೆಗಣಿಸಿರುವುದನ್ನು ದೃಢೀಕರಿಸಿಕೊಂಡು ದಾನಪತ್ರವನ್ನು ರದ್ದುಪಡಿಸಿದ್ದಾರೆ.
ಜೊತೆಗೆ ಎರಡೂ ಸ್ವತ್ತುಗಳ ಖಾತಾವನ್ನು ಟಿ.ಕೆ.ಶಿವ ಪ್ರಸಾದ್ ಅವರ ಹೆಸರಿಗೆ ಬದಲಾಯಿಸಿ ಕೊಡುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ನಿರ್ದೇಶಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


