ಬೆಂಗಳೂರು: ವಿಶೇಷಚೇತನ ವ್ಯಕ್ತಿಯೊಬ್ಬರ ಅಂಗಡಿ ಪಾದಚಾರಿ ಮಾರ್ಗದಲ್ಲಿದೆ ಎಂದು ಆರೋಪಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ದೊಮ್ಮಲೂರು ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್(ಎಇಇ) ಮೂರ್ತಿ ಎಂಬವರು ಯಾವುದೆ ಸಮೀಕ್ಷೆ ನಡೆಸದೆ ಜೆಸಿಬಿಯೊಂದಿಗೆ ಬಂದು ಅಂಗಡಿಯನ್ನು ನೆಲಸಮಗೊಳಿಸಿದ್ದಾರೆ ಎಂದು ವಿವೇಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆಸ್ಟಿನ್ ಟೌನ್ ನ ಗ್ಯಾಂಗ್ಟನ್ ಕ್ವಾರ್ಟಸ್ ನಿವಾಸಿಯಾಗಿರುವ ವಿಶೇಷಚೇತನ ನಿತ್ಯಾನಂದನ್ ಎಂಬವರು ಬ್ಯಾಟರಿ ಅಂಗಡಿ ಇಟ್ಟುಕೊಂಡಿದ್ದರು.
ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹೈಕೋರ್ಟ್ ಆದೇಶ ಹಾಗೂ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ಆಯುಕ್ತರ ಸೂಚನೆಗೂ ಮನ್ನಣೆ ನೀಡಿದೆ, ನನ್ನ ಪರವಾನಗಿಯನ್ನು ನವೀಕರಣಗೊಳಿಸದೆ. ಏಕಾಏಕಿ ಬಂದು ನನ್ನ ಅಂಗಡಿ ನೆಲಸಮ ಮಾಡಿ ಹೋಗಿದ್ದಾರೆ ಎಂದು ಅಂಗವಿಕಲ ನಿತ್ಯಾನಂದ ದೂರು ನೀಡಿದ್ದಾರೆ.


