ಬೆಂಗಳೂರು: ಎಂಟು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕುಂಟೆ ಪೊಲೀಸ್ ಠಾಣಾ ಪೊಲೀಸರು ಆರೋಪಿ ಅಂಗಡಿ ಮಾಲಿಕನನ್ನು ಬಂಧಿಸಿದ್ದಾರೆ.
ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ನೊಂದ ಬಾಲಕಿ ಚಿಪ್ಸ್ ಪ್ಯಾಕೆಟ್ ಖರೀದಿಸಲು ತನ್ನ ಮನೆಯ ಹತ್ತಿರದ ಅಂಗಡಿಗೆ ಹೋಗಿದ್ದಳು. ಆಗ ಅಂಗಡಿಯಲ್ಲಿದ್ದ 25 ವರ್ಷದ ವ್ಯಕ್ತಿ, ಚಿಪ್ಸ್ ಪ್ಯಾಕೆಟ್ ಅನ್ನು ಪಕ್ಕದಲ್ಲಿರುವ ಗೋಡೌನ್ನಿಂದ ತರಬೇಕೆಂದು ಹೇಳಿದ್ದಾನೆ. ಚಿಪ್ಸ್ ನೀಡುವ ನೆಪದಲ್ಲಿ ಗೋಡೌನ್ ಗೆ ಕರೆದೊಯ್ದು ತನ್ನ ಖಾಸಗಿ ಭಾಗಗಳನ್ನು ಮುಟ್ಟಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.
ಬಾಲಕಿ ಚಿಪ್ಸ್ ಪ್ಯಾಕೆಟ್ ತೆಗೆದುಕೊಂಡು ಮನೆಗೆ ಬಂದು ಅಳಲು ಪ್ರಾರಂಭಿಸಿದಳು. ಆಕೆಯ ಚಿಕ್ಕಮ್ಮ ಕಾರಣ ಕೇಳಿದಾಗ, ಅವಳು ಘಟನೆ ಬಗ್ಗೆ ಮಾಹಿತಿ ನೀಡಿದ್ದಾಳೆ. ಪೋಷಕರು ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾರೆ.
ಆರೋಪಿ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯಡಿಯಲ್ಲಿ ಲೈಂಗಿಕ ದೌರ್ಜನ್ಯದ ಪ್ರಕರಣವನ್ನು ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC