ಐಸ್ ಕ್ರೀಮ್ ಮಾರಾಟಗಾರನೊಬ್ಬ ತನ್ನ ಬಳಿ ಐಸ್ ಕ್ರೀಮ್ ಕೊಳ್ಳಲು ಬಂದ ಬಾಲಕಿಗೆ ಫ್ರೀ ಐಸ್ ಕ್ರೀಮ್ ಆಸೆ ತೋರಿಸಿ ಆ ಮುಗ್ಧ ಬಾಲಕಿಯ ಮೈ ಮೇಲೆ ಕೈ ಹಾಕಿ ಅಸಭ್ಯವಾಗಿ ವರ್ತಿಸಿರುವ ಅಘಾತಕಾರಿ ವಿಡಿಯೋವೊಂದು ವೈರಲ್ ಆಗುತ್ತಿದೆ.
ಈ ಅಘಾತಕಾರಿ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದ್ದು, ಐಸ್ ಕ್ರೀಮ್ ಮಾರಾಟಗಾರನೊಬ್ಬ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ.
ಮಾಹಿತಿ ಪ್ರಕಾರ ಎರಡು ವಾರಗಳ ಹಿಂದೆ ಜಹಾಂಗೀರಾಬಾದ್‌ನಲ್ಲಿ 11 ವರ್ಷ ವಯಸ್ಸಿನ ಬಾಲಕಿಯೊಬ್ಬಳು ಐಸ್ ಕ್ರೀಮ್ ಕೊಳ್ಳಲು ಬಂದಿದ್ದು, ಆ ಸಂದರ್ಭದಲ್ಲಿ ಮಾರಾಟಗಾರ ಮೊಹಮ್ಮದ್ ಖಾಲಿದ್ ಖಾನ್ (52) ಎಂಬಾತ ಬಾಲಕಿಯ ಮೈ ಮೇಲೆ ಕೈ ಹಾಕಿ ಅಸಭ್ಯವಾಗಿ ವರ್ತಿಸಿದ್ದಾನೆ. ಈತನ ಈ ಹೇಯ ಕೃತ್ಯವನ್ನು ಸ್ಥಳೀಯ ನಿವಾಸಿಯಾದ ರಮೇಶ್ ಸಾಹು ಎಂಬಾತ ರೆಕಾರ್ಡ್ ಮಾಡಿದ್ದು, ವಿಡಿಯೋ ವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾನೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಾಲಕಿಯ ತಾಯಿ ದೂರನ್ನು ನೀಡಿದ್ದು, ತಾಯಿ ನೀಡಿದ ದೂರಿನ ಹಿನ್ನೆಲೆ ಜಹಾಂಗೀರಾಬಾದ್ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ತನ್ನ ಊರಿಗೆ ಎಸ್ಕೇಪ್ ಆಗಿದ್ದು, ನಂತರ ಆರೋಪಿಯನ್ನು ಕಲ್ಪಿ ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಜುಲೈ 10 ರಂದು ಈ ಕುರಿತ ಪೋಸ್ಟ್ ಒಂದನ್ನು CeoVoice_ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಈ ವಿಡಿಯೋ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರರು ‘ ಇಂತಹ ಕಾಮುಕರಿಗೆ ಸರಿಯಾದ ಶಿಕ್ಷೆ ನೀಡಬೇಕು’ ಎಂದು ಕಿಡಿಕಾರಿದ್ದಾರೆ.
ಇನ್ನೂ ಅನೇಕರು ಇಂತಹ ಕಾಮುಕರು ಬೀದಿ ಬೀದಿಗಳಲ್ಲಿ ಇದ್ದು, ಇವರ ನೀಚ ಕೃತ್ಯ ನಿಲ್ಲಲು, ಇಂತಹವರಿಗೆ ಬಿಸಿ ಮುಟ್ಟಿಸಲೇ ಬೇಕು ಎಂದು ಕಾಮೆಂಟ್ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA