ಗೃಹಪ್ರವೇಶ ಆಹ್ವಾನ ಪತ್ರಿಕೆ ನೀಡುವ ನೆಪದಲ್ಲಿ ಬಂದ ಅಪರಿಚಿತರು ಹಾಡಹಗಲೇ ಚಿನ್ನದ ವ್ಯಾಪಾರಿ ಮತ್ತು ಪತ್ನಿಯ ಮೇಲೆ ಚಾಕು ಇರಿದು ಪರಾರಿಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಹೂಟಗಳ್ಳಿಯ ಕೆಎಚ್ ಬಿ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಬಾಬುರಾವ್ (57), ಪತ್ನಿ ಕಮಲಬಾಯಿ (52) ಚಾಕು ಇರಿತಕ್ಕೆ ಒಳಗಾದವರು. ಅಪರಿಚಿತರಿಬ್ಬರು ಗೃಹಪ್ರವೇಶ ಆಹ್ವಾನ ಪತ್ರ ನೀಡುವ ನೆಪದಲ್ಲಿ ಬಂದು ಚಿನ್ನದ ವ್ಯಾಪಾರಿ ಬಾಬುರಾವ್ ರನ್ನ ನಿಮ್ಮ ಪುತ್ರ ಹರೀಶ್ ಎಲ್ಲಿ ಎಂದು ಕೇಳಿದ್ದಾರೆ. ಹರೀಶ್ ಮನೇಲಿ ಇಲ್ಲ ಎಂದು ಬಾಬುರಾವ್ ಎಂದು ಹೇಳಿದ್ದಾರೆ.
ಈ ವೇಳೆ ಕುಪಿತಗೊಂಡ ಅಪರಿಚಿತರಿಬ್ಬರು ಬಾಬುರಾವ್ ಮತ್ತು ಪತ್ನಿ ಕಮಲಬಾಯಿಗೆ ಚಾಕುವಿನಿಂದ ಇರಿದಿದ್ದಾರೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾರೆ. ಸ್ಥಳಕ್ಕೆ ವಿಜಯನಗರ ಠಾಣೆ ಪೋಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


