ಗದಗ: ನಗರದ ಹೊರವಲಯ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಬೈಕ್ ಗೆ ಸರ್ಕಾರಿ ಜೀಪ್ ಡಿಕ್ಕಿಯಾಗಿ ಸ್ಥಳದಲ್ಲೇ ಬೈಕ್ ಸವಾರ ಸಾವನ್ನಪ್ಪಿದ ಘಟನೆ ನಡೆದಿದೆ. ಶಿವಪ್ಪ ಮಾದರ(55) ಮೃತ ರ್ದುದೈವಿ.
ಧಾರವಾಡ ಕೆಸಿಸಿ ಬ್ಯಾಂಕ್ ಗೆ ಸೇರಿದ ಜೀಪ್ ಇದಾಗಿದ್ದು, ಜೀಪ್ ಡಿಕ್ಕಿ ರಭಸಕ್ಕೆ ಸವಾರ ನೂರು ಅಡಿ ದೂರ ಬಿದ್ದಿದ್ದಾನೆ. ಅಪಘಾತ ಬಳಿಕ ಚಾಲಕ ಸ್ಥಳದಲ್ಲೇ ಜೀಪ್ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಈ ಘಟನೆ ಗದಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


